Saturday, August 22, 2026

BDA Apartments

Home Front Page ಈಗ ಬಿಡುಗಡೆಯಾಗಿರುವ ಹಣ ಸಾಕಾಗಲ್ಲ: ಮತ್ತೆ ಪರಿಹಾರ ರಿಲೀಸ್ ಮಾಡುವ ವಿಶ್ವಾಸವಿದೆ- ಸಿಎಂ ಬಿಎಸ್ ಯಡಿಯೂರಪ್ಪ…

ಈಗ ಬಿಡುಗಡೆಯಾಗಿರುವ ಹಣ ಸಾಕಾಗಲ್ಲ: ಮತ್ತೆ ಪರಿಹಾರ ರಿಲೀಸ್ ಮಾಡುವ ವಿಶ್ವಾಸವಿದೆ- ಸಿಎಂ ಬಿಎಸ್ ಯಡಿಯೂರಪ್ಪ…

ಬೆಂಗಳೂರು,ಜ,7,2020(www.justkannada.in):  ಕೇಂದ್ರ ಸರ್ಕಾರ 2ನೇ ಹಂತದಲ್ಲಿ ಬಿಡುಗಡೆ ಮಾಡಿರುವ ಪರಿಹಾರ ಹಣ ಸಾಕಾಗಲ್ಲ. ಹೀಗಾಗಿ ಕೇಂದ್ರಸರ್ಕಾರ ಮತ್ತೆ ಪರಿಹಾರ ಬಿಡುಗಡೆ ಮಾಡುವ ವಿಶ್ವಾಸವಿದೆ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ತಿಳಿಸಿದರು.

ಬೆಂಗಳೂರಿನಲ್ಲಿ ಇಂದು ಮಾಧ್ಯಮದ ಜತೆ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ರಾಜ್ಯದಲ್ಲಿ ಉಂಟಾಗಿದ್ದ ಪ್ರವಾಹದಿಂದ ಸಾಕಷ್ಟು ಹಾನಿಯಾಗಿದೆ. ಈ ಹಿನ್ನೆಲೆ ಕೇಂದ್ರ ಸರ್ಕಾರ ಎರಡು ಕಂತುಗಳಲ್ಲಿ ಸುಮಾರು ಮೂರು ಸಾವಿರ ಕೋಟಿ ಪರಿಹಾರ ಬಿಡುಗಡೆ ಮಾಡಿದೆ. ಆದರೆ ಆ ಹಣ ಸಾಕಾಗಲ್ಲ. ಅದ್ದರಿಂದ ಮತ್ತೆ ಪರಿಹಾರಕ್ಕೆ ಮನವಿ ಮಾಡುತ್ತೇನೆ. ಹೀಗಾಗಿ ಕೇಂದ್ರ ಸರ್ಕಾರ ಮತ್ತೆ ಪರಿಹಾರ ಬಿಡುಗಡೆ ಮಾಡುವ ವಿಶ್ವಾಸವಿದೆ  ಎಂದರು.

ಮೊದಲ ಹಂತದಲ್ಲಿ ಕೇಂದ್ರ ಸರ್ಕಾರ 1200 ಕೋಟಿ ರೂ ಪರಿಹಾರ ರಿಲೀಸ್ ಮಾಡಿತ್ತು. ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಬಂದು ಹೋದ ಮೂರು ದಿನಗಳಲ್ಲಿ 2ನೇ ಕಂತಿನಲ್ಲಿ 1869 ಕೋಟಿ ಬಿಡುಗಡೆ ಮಾಡಿದ್ದಾರೆ. ಇದಕ್ಕಾಗಿ ನಾನು ಅವರನ್ನು ಜನತೆಯ ಪರವಾಗಿ ಅಭಿನಂದಿಸುತ್ತೇನೆ ಎಂದರು.

Key words: relief money- released – not enough-confident -releasing – again-CM BS Yeddyurappa.