ರಾಜ್ಯ ರೈತರಿಗೆ ಮತ್ತೆ ಶಾಕ್:  ತಮಿಳುನಾಡಿಗೆ ಮತ್ತೆ 5 ಸಾವಿರ ಕ್ಯೂಸೆಕ್ ಕಾವೇರಿ ನೀರು ಹರಿಸುವಂತೆ ಆದೇಶ.

ಬೆಂಗಳೂರು,ಸೆಪ್ಟಂಬರ್,12,2023(www.justkannada.in):  ರಾಜ್ಯದಲ್ಲಿ ಸರಿಯಾಗಿ ಮಳೆಯಾಗದೇ ಕೆಆರ್ ಎಸ್ ಜಲಾಶಯ ನೀರಿನ ಮಟ್ಟ ತೀರ ಕುಸಿದಿದ್ದು ಮುಂದೆ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುವ ಸ್ಥಿತಿ ತಲೆದೂರಿದೆ. ಇಂತಹ ಪರಿಸ್ಥಿತಿಯಲ್ಲೂ ಸಹ ಇದೀಗ ಮತ್ತೆ ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ  ಕಾವೇರಿ ನೀರು ನಿಯಂತ್ರಣ ಸಮಿತಿ ಕರ್ನಾಟಕಕ್ಕೆ ಸೂಚನೆ ನೀಡಿದೆ.

ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ  ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ನಡೆದಿದ್ದು ಕರ್ನಾಟಕ ಅಧಿಕಾರಿಗಳು ಮತ್ತು ತಮಿಳುನಾಡು ಅಧಿಕಾರಿಗಳು ಭಾಗವಹಿಸಿದ್ದರು. ಇದೀಗ ಸಭೆಯಲ್ಲಿ ಮತ್ತೆ ಮುಂದಿನ 15 ದಿನಗಳ ಕಾಲ  5 ಸಾವಿರ ಕ್ಯೂಸೆಕ್ ಕಾವೇರಿ ನೀರು ಹರಿಸುವಂತೆ ಸಮಿತಿ ಕರ್ನಾಟಕಕ್ಕೆ ಸೂಚನೆ ನೀಡಿದೆ.

 

ಕಾವೇರಿ ಜಲಾನಯನ ಭಾಗದಲ್ಲಿ ಸರಿಯಾಗಿ ಮಳೆಯಾಗದೇ ಕೆಆರ್ ಎಸ್ ಜಲಾಶಯ ಭರ್ತಿಯಾಗಿಲ್ಲ. ಆಗಿದ್ದರೂ  5ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಳೆದ ಸಭೆಯಲ್ಲಿ ಪ್ರಾಧಿಕಾರ ಸೂಚಿಸಿತ್ತು. ಇದೀಗ ಮತ್ತೆ ನೀರು ಬಿಡುವಂತೆ ಆದೇಶಿದ್ದು ರಾಜ್ಯದ ರೈತರಿಗೆ ಜನರಿಗೆ ಮತ್ತಷ್ಟು ಆತಂಕವನ್ನುಂಟು ಮಾಡಿದೆ.

Key words:  release -5 thousand -cusecs – Cauvery water – Tamil Nadu