ಪ್ರಾದೇಶಿಕ ಪಕ್ಷ ಕಟ್ಟಿ, ನಿಮ್ಮ ಸಾಮರ್ಥ್ಯದ ಮೇಲೆ 10 ಸ್ಥಾನ ಗೆದ್ದು ತೋರಿಸಿ : ಸಿದ್ದರಾಮಯ್ಯ ಅವರಿಗೆ ಎಚ್.ಡಿ.ಕುಮಾರಸ್ವಾಮಿ ಸವಾಲು

ಮೈಸೂರು,ಡಿಸೆಂಬರ್,19,2020(www.justkannada.in) : ಜೆಡಿಎಸ್‌ ಸ್ಥಾನ ಗಳಿಕೆ, ದೇವೇಗೌಡರು, ನನ್ನ ಬಗ್ಗೆ ಅಡಿಗಡಿಗೂ ಟೀಕಿಸುವ ಸಿದ್ದರಾಮಯ್ಯರಿಗೆ ಒಂದು ಸವಾಲು. ರಾಷ್ಟ್ರೀಯ ಪಕ್ಷದ ನೆರಳಲ್ಲಿರುವ ತಾವು ಪ್ರಾದೇಶಿಕ ಪಕ್ಷ ಕಟ್ಟಿ, ನಿಮ್ಮ ಸಾಮರ್ಥ್ಯದ ಮೇಲೆ 10 ಸ್ಥಾನ ಗೆದ್ದು ತೋರಿಸಿ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದಾರೆ.

Teachers,solve,problems,Government,bound,Minister,R.Ashok

ಸಿದ್ದರಾಮಯ್ಯ ಅವರ ಉಡಾಫೆ ಮಾತುಗಳಿಗೆ ಪ್ರತಿಕ್ರಿಯಿಸಬಾರದೆಂದು ಇಚ್ಚಿಸಿದ್ದೆ. ಆದರೆ, ಚಾಮುಂಡೇಶ್ವರಿಯಲ್ಲಿನ ಭಾಷಣದಿಂದ ಹೊಮ್ಮಿರುವ ಅವರ ದ್ವಂದ್ವ ನಿಲುವಿನ ಬಗ್ಗೆ ಮಾತಾಡಬೇಕಿದೆ. ಅಲ್ಲಿ ಅವರು ಏನಾದರೂ ಹೇಳಿರಲಿ. ಅದರೆ, ಒಳಒಪ್ಪಂದದ ಆರೋಪ, ಕುಮಾರಸ್ವಾಮಿಯನ್ನು ಸಿಎಂ ಆಗಲು ಬಿಡುತ್ತಿರಲಿಲ್ಲ ಎಂಬ ದ್ವಂದ್ವದ ಬಗ್ಗೆ ಮಾತಾಡುವೆ ಎಂದಿದ್ದಾರೆ.Regional,party,Win,10 places,your,ability,show,Siddaramaiah,challenged,H.D.Kumaraswamy

ಪ್ರಾದೇಶಿಕ ಪಕ್ಷ ಕಟ್ಟಿ, ನಿಮ್ಮ ಸಾಮರ್ಥ್ಯದ ಮೇಲೆ 10 ಸ್ಥಾನ ಗೆದ್ದು ತೋರಿಸಿದ ಬಳಿಕ ಜೆಡಿಎಸ್‌ ಸ್ಥಾನ ಗಳಿಕೆ, ನಮ್ಮ ನಾಯಕತ್ವಗಳ ಬಗ್ಗೆ ಮಾತಾಡಿ. ಆಗ ನಿಮ್ಮ ತಾಕತ್ತು ಒಪ್ಪೋಣ ಎಂದು ಟಾಂಗ್ ನೀಡಿದ್ದಾರೆ.

ಸಿದ್ದರಾಮಯ್ಯ ರಾಜಕೀಯ ಒಳಒಪ್ಪಂದಗಳ ಜನಕ

ಸಿದ್ದರಾಮಯ್ಯನವರೇ ಎಂದೂ ರಾಜಕೀಯ ಒಳಒಪ್ಪಂದದ ಬಗ್ಗೆ ಮಾತಾಡಬೇಡಿ. ತಾವು ರಾಜಕೀಯ ಒಳಒಪ್ಪಂದಗಳ ಜನಕ. ಅದು ಯಾವಾಗಲೂ ಸಾಬೀತಾಗಿದೆ.

Regional,party,Win,10 places,your,ability,show,Siddaramaiah,challenged,H.D.Kumaraswamy

ಇನ್ನೆಂದು ಜೆಡಿಎಸ್‌ನ ಸ್ಥಾನಗಳಿಕೆ ಬಗ್ಗೆ ಲಘುವಾಗಿ ಮಾತಾಡಬೇಡಿ. ಸ್ವತಂತ್ರ ಪ್ರಾದೇಶಿಕ ಪಕ್ಷ ಕಟ್ಟಲು ಬೇಕಿರುವ ನಾಯಕತ್ವ, ಅದು ಬೇಡುವ ಶ್ರಮದ ಬಗ್ಗೆ ನಿಮಗೆ ಅರಿವಿಲ್ಲ. ನಿಮಗೆ ಅದು ಸಾಧ್ಯವೂ ಇಲ್ಲ ಎಂದು ತಿಳಿಸಿದ್ದಾರೆ.

English summary….

Build a regional party and show me by winning at least 10 seats in the State: HDK challenges Siddu
Mysuru, Dec. 19, 2020 (www.justkannada.in): “I would like to challenge Siddaramaiah, who keeps on criticizing JDS, H.D. Devegowda, and me. Let him build a regional party and win at least 10 seats on his own,” said former Chief Minister H.D. Kumaraswamy.
In his response to Siddaramaiah’s criticism, H.D. Kumaraswamy said, “I wanted to keep quiet and not respond to his careless words. But he has forced me to talk from his dual views during his recent visit to the Chamundeshwari Assembly constituency. I just want to answer his dual-view on the secret nexus, and he would not have allowed me to become the CM if he wanted to.
“I challenge him. Let him build a regional party and win at least ten seats on his strength. Let him talk about JDS and leadership afterward. Let him prove his strength by doing this,” he said.
Further, he said Siddaramaiah himself is the father of the secret nexus. It has been proved several times. “I warn him not to speak about JDS lightly. He doesn’t have the leadership quality or hard work that is required to build a regional party. It is not possible for him,” he said.

Keywords: H.D. Kumaraswamy/ Siddaramaiah/ JDS/ regional party

key words : Regional-party-Win-10 places-your-ability-show- Siddaramaiah-challenged-H.D.Kumaraswamy