ಹೆಚ್ಚುವರಿ ಅಕ್ಕಿ ನೀಡಲು ನಿರಾಕರಣೆ ಹಿನ್ನೆಲೆ: ಕೇಂದ್ರದ ವಿರುದ್ಧ ಹೆಚ್.ವಿಶ್ವನಾಥ್ ಕಿಡಿ.

ಹುಬ್ಬಳ್ಳಿ, ಜೂನ್,22,2023(www.justkannada.in): ರಾಜ್ಯಕ್ಕೆ ಹೆಚ್ಚುವರಿ ಅಕ್ಕಿ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದ  ಹಿನ್ನೆಲೆ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಕಿಡಿ ಕಾರಿದ್ದಾರೆ.

ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ವಿಶ್ವನಾಥ್, ಬೇರೆ ದೇಶಕ್ಕೆ ಅಕ್ಕಿ ಕೇಳುತ್ತಿಲ್ಲ, ನಮ್ಮ ದೇಶಕ್ಕೆ ಅಕ್ಕಿ ಕೇಳುತ್ತಿದ್ದೇವೆ. ನಮ್ಮ ದೇಶದಲ್ಲಿರುವ ಸರ್ಕಾರಕ್ಕೆ ಅಕ್ಕಿ ಕೊಡಿ ಅಂತಾ ಕೇಳ್ತಿದ್ದೇವೆ. ಅಕ್ಕಿ ವಿಚಾರದಲ್ಲಿ ರಾಜಕಾರಣ ಮಾಡುವ ಅವಶ್ಯಕತೆ ಇಲ್ಲ ಎಂದು ಗುಡುಗಿದರು.

ಬಿಜೆಪಿಯವರು ಬರೀ ದೇವರು ದೇವರು ಅಂತಿದ್ದರು.  ಆ ದೇವರ ತೋರಿಸಲು ಕಾಂಗ್ರೆಸ್ ನವರು ಬಸ್ ಬಿಟ್ಟಿದ್ದಾರೆ. ಬಿಜೆಪಿಯವರು ಹೇಳುವ ದೇವರನ್ನ ತೋರಿಸಲು ಬಸ್ ಬಿಟ್ಟಿದ್ದಾರೆ. ನಮ್ಮ ಹೆಣ್ಣು ಮಕ್ಕಳು ಮನೆ ಬಿಟ್ಟು ಎಲ್ಲಿಯೂ ಹೋಗುತ್ತಿರಲಿಲ್ಲ. ಈಗ  ಬಸ್ ನಲ್ಲಿ ಉಚಿತ ಪ್ರಯಾಣ ಒಳ್ಳೆಯ ನಿರ್ಧಾರವಾಗಿದೆ ಎಂದು ಶ್ಲಾಘಿಸಿದರು.

 

ಬಸವರಾಜ ಬೊಮ್ಮಾಯಿ ಸರ್ಕಾರ ನಡೆಸುವಲ್ಲಿ ವಿಫಲರಾದರು. ಪ್ರತಿಭೆ ಇದ್ದರೂ ಬೊಮ್ಮಾಯಿ ಫೇಲ್ ಆಗಿದ್ದಾರೆ ಎಂದು ಹೆಚ್.ವಿಶ್ವನಾಥ್ ಟಾಂಗ್ ನೀಡಿದರು.

Key words: Refusal – provide -rice – H. Vishwanath – Centre.