ಒಳಮೀಸಲಾತಿ ಇತ್ಯರ್ಥ ಆಗುವವರೆಗೆ ಹಿಂದಿನ ಮೀಸಲಾತಿಯಂತೆ ನೇಮಕ ಮಾಡಿ- ಜ್ಞಾನ ಪ್ರಕಾಶ ಸ್ವಾಮೀಜಿ ಮನವಿ

ಬೆಂಗಳೂರು,ಏಪ್ರಿಲ್,22,2026 (www.justkannada.in): ಒಳಮೀಸಲಾತಿ ಗೊಂದಲದಿಂದಾಗಿ ನೇಮಕಾತಿಗಳಿಗೆ ತಡೆಬಿದ್ದಿದ್ದು ಸುಮಾರು ಮೂರು ವರ್ಷಗಳಿಂದಲೂ ನೇಮಕಾತಿಗಳು ಆಗದೆ ಉದ್ಯೋಗಾಕಾಂಕ್ಷಿಗಳು ಬೀದಿಗಿಳಿದಿದ್ದಾರೆ. ಈ ಮಧ್ಯೆ ಒಳಮೀಸಲಾತಿ ಇತ್ಯರ್ಥ ಆಗುವವರೆಗೆ ಹಿಂದಿನ ಮೀಸಲಾತಿಯಂತೆ ನೇಮಕ ಮಾಡಿ ಎಂದು ಸಿಎಂ ಸಿದ್ದರಾಮಯ್ಯಗೆ ಉರಿಲಿಂಗ ಪೆದ್ದಿಮಠದ  ಜ್ಞಾನ ಪ್ರಕಾಶ ಸ್ವಾಮೀಜಿ ಮನವಿ ಮಾಡಿದ್ದಾರೆ.

ಇಂದು ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯರನ್ನ ಭೇಟಿಯಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಜ್ಞಾನ ಪ್ರಕಾಶ ಸ್ವಾಮೀಜಿ, ಒಳಮೀಸಲಾತಿ ವಿಚಾರದಲ್ಲಿ  ಆತುರದ ನಿರ್ಧಾ ರಮಾಡದಂತೆ ಮನವಿ ಮಾಡಿದ್ದೇನೆ.  ಒಳಮೀಸಲಾತಿ ಇತ್ಯರ್ಥ  ಆಗುವವರೆಗೆ ಹಿಂದಿನ ಮೀಸಲಾತಿಯಂತೆ ನೇಮಕ ಮಾಡಿ ಒಳಮೀಸಲಾತಿ ನಿಯಮದಡಿ ನೇಮಕಾತಿ ಪ್ರಕ್ರಿಯೆ ಮಾಡಬಾರದು ಹಿಂದಿನ ಮೀಸಲಾತಿಯಿಂದ ನೇಮಕಾತಿ ಮಾಡಲು ಮನವಿ ಮಾಡಿದ್ದೇವೆ  ಎಂದರು.

ಏಪ್ರಿಲ್ 24ರ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲ್ಲ ಎಂದಿದ್ದಾರೆ.  ಚರ್ಚೆ ಮಾಡಿಯೇ ಒಳ ಮೀಸಲಾತಿ ಜಾರಿ ಮಾಡುತ್ತೇವೆ ಎಂದಿದ್ದಾರೆ. ಒಳಮೀಸಲಾತಿ ಗೊಂದಲ ಇತ್ಯರ್ಥ  ಮಾಡಬೇಕು ಎಂದು ಉರಿಲಿಂಗ ಜ್ಞಾನ ಪ್ರಕಾಶ ಸ್ವಾಮೀಜಿ ಆಗ್ರಹಿಸಿದರು.

Key words: Recruitment, internal reservation, Gyana Prakash Swamiji, CM Siddaramaiah