“ವಾಸ್ತವ ಸತ್ಯಗಳನ್ನು ನಂಬುವಂತ್ತಾದಾಗ ಮಾತ್ರ ಈ ನೆಲದ ಇತಿಹಾಸ ಬಯಲಾಗುತ್ತದೆ” : ಸಹ ಪ್ರಾಧ್ಯಾಪಕಿ  ಡಾ.ವಿಜಯಲಕ್ಷ್ಮೀ ಮನಾಪುರ

ಮೈಸೂರು,ಫೆಬ್ರವರಿ,25,2021(www.justkannada.in) : ಶಿಷ್ಟ ಪುರಾಣಗಳು ಕೆತ್ತಿ ನಿಲ್ಲಿಸಿರುವ ಇತಿಹಾಸದ ನೆಲವನ್ನು ಅಗೆದು, ಬಗೆವ ಸಂಸ್ಕೃತಿ ಹುಟ್ಟುಕೊಂಡಿದೆ. ಯಜಮಾನ ಸಂಸ್ಕೃತಿಯು ಶ್ರೇಷ್ವವೆಂದು ಬಿಂಬಿಸಿರುವ ಹುನ್ನಾರಗಳ ವಿಶ್ಲೇಷಿಸುವ ಸಂಶೋಧನೆಗಳು ಅಗತ್ಯ. ವಾಸ್ತವ ಸತ್ಯಗಳನ್ನು ಸಮುದಾಯಗಳು ನಂಬುವಂತ್ತಾದಾಗ ಮಾತ್ರ ಈ ನೆಲದ ಇತಿಹಾಸ ಬಯಲಾಗುತ್ತದೆ. ಆ ಕಾಲ ಬೇಗ ಬರಲಿ ಎಂದು ಮಹಾರಾಜ ಪದವಿ ಕಾಲೇಜು ಸಹ ಪ್ರಾಧ್ಯಾಪಕರಾದ  ಡಾ.ವಿಜಯಲಕ್ಷ್ಮೀ ಮನಾಪುರ ಹೇಳಿದರು.

jkಎಚ್.ಡಿ.ಕೋಟೆ ತಾಲೂಕಿನಲ್ಲಿ ನಡೆದ 18ನೇಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ “ಬೆಟ್ಟದ ಚಾಮುಂಡಿ ಕಾವ್ಯ” ಕುರಿತು ಅವರು ಮಾತನಾಡಿದರು.

ಚಾಮುಂಡಿ ಕಾವ್ಯವು ಶಿಷ್ಟ ಪುರಾಣಗಳಿಗಿಂತ ಭಿನ್ನವಾಗಿರುವ ಕಾವ್ಯ

ಚಾಮುಂಡಿ ಕಾವ್ಯವು ಶಿಷ್ಟ ಪುರಾಣಗಳಿಗಿಂತ ಭಿನ್ನವಾಗಿರುವ ಕಾವ್ಯವಾಗಿದೆ. ಕಾವ್ಯದಲ್ಲಿ ನಂಜುಂಡ, ಚಾಮುಂಡಿ, ಉತ್ತನಹಳ್ಳಿ ಮಾರಮ್ಮ ಸೇರಿದಂತೆ ಹಲವು ಪ್ರಮುಖ ಪಾತ್ರಗಳಿವೆ. ನಿಜ ಜೀವನದಲ್ಲಿ ಕಂಡು ಬರುವ ಪ್ರೇಮ, ಸರಸ ಸಲ್ಲಾಪ, ಸವತಿಯರ ಕಾಟ, ಪ್ರೇಮವನ್ನು ಉಳಿಸಿಕೊಳ್ಳುವ ತಂತ್ರಗಳು ಕಾಣಬಹುದಾಗಿದೆ. ಈ ನೆಲದ ಮಣ್ಣಿನ ಸೊಗಡನ್ನು ಮೈಗೂಡಿಸಿಕೊಂಡು ರೂಪು ತಳೆದಿದೆ ಎನಿಸುತ್ತದೆ ಎಂದರು.

ಕಾವ್ಯದಲ್ಲಿ ಮಹಿಷಾಸುರ ಯಾರು? ಐಷಾಸುರ ಯಾರು? ಚಾಮುಂಡಿ ಯಾರು? ಎಲ್ಲಿಂದ ಬಂದರೂ ಎಂಬುದರ ಬಗ್ಗೆ ಮಾಹಿತಿ ನೀಡಿಲ್ಲ. ಯಾವ ಉದ್ದೇಶಕ್ಕಾಗಿ ಬಂದರೂ ಎಂಬುದನ್ನು ತಿಳಿಸಿಲ್ಲ. ಕಾವ್ಯದ 2ನೇ ಭಾಗದಲ್ಲಿ ಚಾಮುಂಡಿ, ನಂಜುಂಡರ ಪ್ರಣಯ ಪ್ರಸಂಗವೇ ತುಂಬಿದೆ ಎಂದು ಹೇಳಿದರು.

ಜಾನಪದರಲ್ಲಿ ದೇವರಿಗೂ, ಮನುಷ್ಯರಿಗೂ ಅಂತರ ಕಡಿಮೆ

ಮಹಾಪರಂಪರೆ, ಶಿಷ್ಟ ಪರಂಪರೆಯಲ್ಲಿ ದೇವರು ಹಾಗೂ ಭಕ್ತರಿಗೂ ಬಹಳ ಅಂತರ. ಜಾನಪದರಲ್ಲಿ ದೇವರಿಗೂ, ಮನುಷ್ಯರಿಗೂ ಅಂತರ ಕಡಿಮೆ. ಜಾನಪದರು ದೇವ, ದೇವತೆಗಳು ನರಮನುಷ್ಯರಂತೆ ಆಡುತ್ತವೆ ಎಂದು ಜಾನಪದರು ಭಾವಿಸಿದ್ದಾರೆ. ಇಲ್ಲಿ ಮಧ್ಯಸ್ಥಿಕೆ ಇರುವುದಿಲ್ಲ. ಏಕವಚನದಲ್ಲಿಯೇ ದೇವರುಗಳನ್ನು ಕರೆಯಲಾಗುವುದು ಎಂದು ವಿವರಿಸಿದರು.

Real-facts-When-believing-Only-This ground-History-Learn-professor-Dr.Vijayalakshmi Manapur

ಜಾನಪದ ಭಾಷೆಯ ಸೊಬಗಿನಿಂದ ಕನ್ನಡ ಭಾಷೆಗೆ ಈ ನೆಲದಲ್ಲಿ ಜೀವ 

ಉಪಭಾಷೆಗಳಿಂದ ಕನ್ನಡವು ರಕ್ತಮಾಂಸ ಕಂಡಗಳಿಂದ ತುಂಬಿ ರಾರಾಜಿಸುತ್ತಿದೆ. ಜಾನಪದ ಭಾಷೆಯ ಸೊಬಗಿನಿಂದ ಕನ್ನಡ ಭಾಷೆ ಈ ನೆಲದಲ್ಲಿ ಜೀವ ಪಡೆದುಕೊಂಡಿದೆ. ಕವನ, ಮಹಾಕಾವ್ಯಗಳಿಂದ ಕಥೆ ಕಾದಂಬರಿಯಿಂದ ಭಾಷೆ ಉಳಿದಿಲ್ಲ. 20 ವರ್ಷದ ಹಿಂದೆ ಬರೆದ ಕೃತಿ ಯಾರು ಓದಿರುವುದೇ ಇಲ್ಲ. ಜಾನಪದ ನಂಬಿಕೆ, ಆಚರಣೆ, ನಡವಳಿಕೆ ಬದುಕು ಕನ್ನಡ ಭಾಷೆ  ಉಳಿದಿದೆ ಎಂದು ಸ್ಮರಿಸಿದರು.

ಈ  ಕಾವ್ಯದಲ್ಲಿ ಜೀವಪರ, ಜೀವನಧರ್ಮ, ಸಾಮರಸ್ಯವಾದ ಸಂಘರ್ಷವನ್ನು ಕಾಣಬಹುದಾಗಿದೆ. ಜಾನಪದ ವಿದ್ವಾಂಸ ಡಾ.ಪಿ.ಕೆ.ರಾಜಶೇಖರ್ ಅವರ ಕಾವ್ಯವನ್ನು ಕುರಿತು ಚಾಮಚಾಲುವೆ ನಾಟಕವು ಯಶಸ್ಸು ಕಂಡಿತು ಎನ್ನುತ್ತಾರೆ. ಆದರೆ, ಅದು ಈ ಕಾವ್ಯದ ಯಶಸ್ಸು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸ ಪಿ.ಕೆ.ರಾಜಶೇಖರ್, ಜಿಲ್ಲಾಧ್ಯಕ್ಷ ವೈ.ಡಿ.ರಾಜಣ್ಣ ಇತರರು ಉಪಸ್ಥಿತರಿದ್ದರು.

key words : Real-facts-When-believing-Only-This ground-History-Learn-professor-Dr.Vijayalakshmi Manapur