ಅಕ್ರಮ ಸ್ಪೋಟಕ ಸಂಗ್ರಹದ ವಿರುದ್ಧ ಶೀಘ್ರದಲ್ಲಿ ಕಾರ್ಯಾಚರಣೆ- ಗೃಹ ಸಚಿವ ಬಸವರಾಜ ಬೊಮ್ಮಾಯಿ…

ದಾವಣಗೆರೆ,ಫೆಬ್ರವರಿ,25,2021(www.justkannada.in): ರಾಜ್ಯದಲ್ಲಿನ ಸ್ಫೋಟಕಗಳನ್ನು ಪತ್ತೆ ಹಚ್ಚಲು ಎಲ್ಲಾ ಗಣಿಗಾರಿಕೆ ಕೇಂದ್ರಗಳ ಮೇಲೆ ವಿಶೇಷ ಕಾರ್ಯಾಚರಣೆ ಮಾಡಿ ಒಟ್ಟಾರೆ ಸ್ಪೋಟಕಗಳ ಆಡಿಟ್ ಮಾಡಲಾಗುವುದು  ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.jk

ಗುರುವಾರ ದಾವಣಗೆರೆಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ,  ಗಣಿ ಮತ್ತು ಗೃಹ ಇಲಾಖೆ ಅಧಿಕಾರಿಗಳ ತಂಡಗಳು ಜಂಟಿಯಾಗಿ ಈ ಕಾರ್ಯಾಚರಣೆ ಮಾಡಲಿವೆ. ರಾಜ್ಯದಲ್ಲಿನ ಹಲವಾರು ಗಣಿಗಾರಿಕೆ ಕೇಂದ್ರಗಳಿವೆ. ಅವುಗಳ ಪೈಕಿ ಅಕ್ರಮ ಮತ್ತು ಸಕ್ರಮ ಗಣಿಗಾರಿಕೆ ಕೇಂದ್ರಗಳೂ ಇವೆ.  ಈ ಎಲ್ಲಾ ಗಣಿಗಾರಿಕೆ ಕೇಂದ್ರಗಳ ವಿರುದ್ಧ ಜಂಟಿ ಕಾರ್ಯಾಚರಣೆಯನ್ನ ಶೀಘ್ರದಲ್ಲೇ ಆರಂಭ ಮಾಡುತ್ತೇವೆ ಎಂದರು.

ಇದುವರೆಗೆ 3 ತಿಂಗಳಿಗೆ ಒಮ್ಮೆ ಗಣಿಗಾರಿಕೆ ಕೇಂದ್ರಗಳನ್ನು ತಪಾಸಣೆ ಮಾಡಲಾಗುತ್ತಿತ್ತು. ಈಗ ಆ ನಿಯಮವನ್ನು ಕಠಿಣಗೊಳಿಸಲಾಗಿದೆ. ಈ ಸಂಬಂಧ ವಿಶೇಷ ಸುತ್ತೋಲೆ ಹೊರಡಿಸಲಾಗಿದೆ. ಇನ್ನು ಮುಂದೆ 15 ದಿನಗಳಿಂದ 1 ತಿಂಗಳ ಅವಧಿಯಲ್ಲಿ ಒಂದು ಬಾರಿ ರಾಜ್ಯದ ಎಲ್ಲ ಗಣಿಗಾರಿಕೆ ಕೇಂದ್ರಗಳನ್ನು ತಪಾಸಣೆ ಮಾಡುತ್ತೇವೆ. ಅಲ್ಲಿ ಸಂಗ್ರಹಿಸಿರುವ ಸ್ಫೋಟಕಗಳನ್ನು ಪತ್ತೆ ಮಾಡುತ್ತೇವೆ. ಅಕ್ರಮ- ಸಕ್ರಮ ಸ್ಪೋಟಕಗಳನ್ನು ಪತ್ತೆ ಮಾಡುತ್ತೇವೆ. ಅಕ್ರಮವಾಗಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ಒಟ್ಟರೆ ರಾಜ್ಯದಲ್ಲಿ ಎಕ್ಸ್ ಪ್ಲೋಸಿವ್ ಗಳ ಆಡಿಟ್ ಮಾಡುತ್ತೇವೆ. ಈ ಜಂಟಿ ಕಾರ್ಯಾಚರಣೆ ಬಗ್ಗೆ ಗಣಿ ಸಚಿವ ಮುರುಗೇಶ ನಿರಾಣಿ ಜತೆ ಚರ್ಚಿಚಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು

ಡಿಜೆ ಹಳ್ಳಿ ಕೆ ಜೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐಎ ತನ್ನ ಚಾರ್ಜ್ ಶೀಟ್ ನ್ನು ಸಲ್ಲಿಸಿದೆ. ಈ ಪೊಲೀಸ್ ಠಾಣೆ ಮೇಲೆ ದಾಳಿ ನಡೆದಿದ್ದು ಹೇಗೆ ಎಂಬುದು ಈಗ ಎಲ್ಲರಿಗೂ ಗೊತ್ತಾಗಿದೆ‌. ಇದೇ ವಿಷಯವನ್ನು ನಾವು ವಿಧಾನಸಭೆಯಲ್ಲೂ ಹೇಳಿದ್ದೆವು. ಅದನ್ನೇ ಎನ್ ಐ ಎ ತನ್ನ ವರದಿಯಲ್ಲಿ ಹೇಳಿದೆ. ಈ ಕೃತ್ಯ ಎಸಗಲು ಸಾಮಾಜಿಕ ಜಾಲತಾಣವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ. ಈ ಕುರಿತು ಕೋರ್ಟ್ ತನ್ನ ಆದೇಶ ನೀಡಲಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.Operatiion -soon -against –illegal- explosives-Home Minister -Basavaraja Bommai

ಕಾನೂನಿನ ಚೌಕಟ್ಟಿನಲ್ಲಿ ಮೀಸಲಾತಿ ಸೌಲಭ್ಯ…

ಹಲವಾರು ಸಮುದಾಯಗಳು ಮೀಸಲಾತಿಗೆ ಮನವಿ ಮಾಡಿವೆ. ಇವರೆಲ್ಲರ ಮನವಿಗಳನ್ನು ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ಕಳಿಸಲಾಗಿದೆ‌. ಮೀಸಲಾತಿ ಸೌಲಭ್ಯ ಕಲ್ಪಿಸಲು ಸಿಎಂ ಯಡಿಯೂರಪ್ಪ ಕ್ರಮ ಕೈಗೊಂಡಿದ್ದಾರೆ. ತಜ್ಞರ ಜತೆ ಸಮಾಲೋಚನೆ ಮಾಡಲಾಗುವುದು.  ಎಲ್ಲ ವರ್ಗಗಳ ಜನರಿಗೆ ನ್ಯಾಯ ಕೊಡಿಸಲು ಸಿಎಂ ಬದ್ಧರಾಗಿದ್ದಾರೆ. ತಮಿಳುನಾಡಿನಲ್ಲಿ ಒಬಿಸಿಗೆ ನೀಡಿರುವ ಮೀಸಲಾತಿ ಪ್ರಮಾಣದ ಬಗ್ಗೆ ನಮಗೆ ಗೊತ್ತಿದೆ.  ಬದಲಾದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯಲ್ಲಿ ಮೀಸಲಾತಿ ನೀಡುವ ಕುರಿತು ಕಾನೂನಿನ ಚೌಕಟ್ಟಿನಲ್ಲಿ‌ ಚರ್ಚೆ ಮಾಡಿ ನಿರ್ಧಾರ ಮಾಡಲಾಗುವುದು ಎಂದು ಬಸವರಾಜ ಬೊಮ್ಮಾಯಿ ಸ್ಪಷ್ಟ ಪಡಿಸಿದರು.

Key words: Operatiion -soon -against –illegal- explosives-Home Minister -Basavaraja Bommai