ಕೊರೋನಾ ಮುಕ್ತ ಮೈಸೂರಿಗಾಗಿ ನಾನು ರಾಜೀನಾಮೆ ನೀಡಲು ಸಿದ್ದ-ಸಚಿವ ಎಸ್.ಟಿ ಸೋಮಶೇಖರ್.

ಮೈಸೂರು,ಜೂನ್,5,2021(www.justkannada.in): ಕೊರೋನ ಮುಕ್ತ ಮೈಸೂರಿಗಾಗಿ ನಾನು ರಾಜೀನಾಮೆ ನೀಡಲು ಸಿದ್ದ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದ್ದಾರೆ.jk

ಜಿಲ್ಲಾ ಉಸ್ತುವಾರಿ ಸಚಿವರ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯಿಸಿದ್ದ ಹಿನ್ನೆಲೆ ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಮೈಸೂರಿನ ಗೊಂದಲಕ್ಕೆ ನಾನು ಕಾರಣಕರ್ತನಲ್ಲ. ನನ್ನನ್ನ ಟೀಕಿಸಲು ಕಾಂಗ್ರೆಸ್‌ಗೆ ನೈತಿಕತೆ ಇಲ್ಲ.ಕಾಂಗ್ರೆಸ್‌ ನಾಯಕರಿಗೆ ಖುಷಿ ಆಗುತ್ತೆ ಅನ್ನೋದಾದ್ರೆ. ನನ್ನ ರಾಜೀನಾಮೆಯಿಂದ ಕೊರೋನಾ ಕಂಟ್ರೋಲ್ ಆಗುತ್ತೆ ಅಂದ್ರೆ ರಾಜೀನಾಮೆ ನೀಡುತ್ತೇನೆ ಎಂಧು  ಕಾಂಗ್ರೆಸ್ ನಾಯಕರ ಆರೋಪಕ್ಕೆ ತಿರುಗೇಟು ನೀಡಿದರು.

ಮೈಸೂರಿನಲ್ಲಿ ಡಿಸಿ ರೋಹಿಣಿ ಸಿಂಧೂರಿ v/s ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಜಟಾಪಟಿ ವಿಚಾರ ಸಂಬಂಧ , ಮೈಸೂರು ಬೆಳವಣಿಗೆ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ಗೊಂದಲಕ್ಕೆ ‘ಇತಿ ಶ್ರೀ’ ಹಾಡುವಂತೆ ಸಿಎಂಗೆ ಮನವಿ ಮಾಡಿದ್ದೇನೆ. ಮುಖ್ಯಮಂತ್ರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ. ಸಿಎಂ ಕ್ರಮ ಕೈಗೊಳ್ಳುವ ನಿರೀಕ್ಷೆಯಲ್ಲಿದ್ದೇವೆ. ಶೀಘ್ರದಲ್ಲೇ ಸಿಎಂ ಏನು ಕ್ರಮ ಕೈಗೊಳ್ತಾರೆ ಅಂತ ಗೊತ್ತಾಗಲಿದೆ‌ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.

ಕೇವಲ ಒಬ್ಬರಿಂದ ಕೊರೊನಾ ಕಂಟ್ರೋಲ್ ಮಾಡೊಕೆ ಸಾಧ್ಯವಿಲ್ಲ.

ಕೇವಲ ಒಬ್ಬ ಅಧಿಕಾರಿಗೆ ಜವಾಬ್ದಾರಿ ಕೊಟ್ಟಿದ್ದೇನೆ ಅನ್ನೋ ಭ್ರಮೆ ಬೇಡ. ‘ಇದು ಟೀಂ ವರ್ಕ್’ 11 ಕ್ಷೇತ್ರದ ಶಾಸಕರು ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಮಟ್ಟದ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ವೈದ್ಯರು, ಪೊಲೀಸರು, ಆಶಾ ಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದಾರೆ. ಕೇವಲ ಒಬ್ಬರಿಂದ ಕೊರೊನಾ ಕಂಟ್ರೋಲ್ ಮಾಡೊಕೆ ಸಾಧ್ಯವಿಲ್ಲ. ಎಲ್ಲರ ಮೇಲೂ ಕೊರೊನಾ ನಿಯಂತ್ರಣದ ಜವಾಬ್ದಾರಿ ಇದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ನುಡಿದರು.

Key words: ready – resign – Mysore- Free- Corona-Minister- ST Somashekhar.