ರಾಜ್ಯಾದ್ಯಂತ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ನಿರ್ಮಿಸಲು ಮನವಿ :ಸಿಎಂಗೆ ಸಚಿವ ಮುರುಗೇಶ್ ನಿರಾಣಿ ಪತ್ರ.

ಬೆಂಗಳೂರು,ಜೂನ್,5,2021(www.justkannada.in): ಬೆಂಗಳೂರು- ಕರ್ನಾಟಕದ ಇತಿಹಾಸದಲ್ಲಿ ಅಭಿವೃದ್ಧಿಗೆ ” ಹೊಸ ವ್ಯಾಖ್ಯಾನ ” ಬರೆದ ಮೈಸೂರು ಸಂಸ್ಥಾನದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿನಲ್ಲಿ  ಕೆಲವು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬೇಕೆಂದು ಗಣಿ ಮತ್ತು ಭೂವಿಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಅವರು ಸರಕಾರಕ್ಕೆ ಮನವಿ ಮಾಡಿದ್ದಾರೆ.jk

ನಾಲ್ವಡಿ ಕೃಷ್ಣರಾಜ ಒಡೆಯರ್ ‌ಅವರ ಜನ್ಮದಿನದ ಹಿನ್ನೆಲೆಯಲ್ಲಿ  ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಸಚಿವ ಮುರುಗೇಶ್ ನಿರಾಣಿ ಅವರು, ಮುಂದಿನ ಯುವಜನಾಂಗಕ್ಕೆ ಇದು ಅತ್ಯಂತ ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಹಾಗೂ ‌ಪದವಿ ಕಾಲೇಜುಗಳ ಪಠ್ಯ ಪುಸ್ತಕದಲ್ಲಿ ಅವರ ಚರಿತ್ರೆಯನ್ನು ಆಳವಡಿಸಲು ಕ್ರಮಕೈಗೊಳ್ಳಬೇಕು. ಸರ್ ಎಂ ವಿಶ್ವೇಶ್ವರಯ್ಯ ಅವರ ಜನ್ಮ ದಿನಾಚರಣೆಯನ್ನು “ಎಂಜಿನಿಯರ್ ‌ ದಿನಾಚರಣೆ” ಮಾಡಿದಂತೆ ಇನ್ನು ಮುಂದೆ ಜೂನ್ 4 ರಂದು ನಾಲ್ವಡಿ ಕೃಷ್ಣರಾಜ ಒಡೆಯರ್  ಜನ್ಮ ‌ದಿನವನ್ನು ಸರಕಾರದ ವತಿಯಿಂದ ಆಚರಿಸಬೇಕು.

ಅನೇಕ ಕೈಗಾರಿಕೆಗಳ ಸ್ಥಾಪನೆಗೆ ಕಾರಣೀಭೂತರಾದ ಅವರ ದಿನಾಚರಣೆಯನ್ನು ‘ಕೈಗಾರಿಕಾ ದಿನಾಚರಣೆ’ ಎಂತಲೂ ಆಚರಸಲು  ಸೂಕ್ತವಾದ ‌ನಿರ್ಧಾರವನ್ನು ತೆಗೆದುಕೊಳ್ಳಬೇಕೆಂದು ಒತ್ತಾಯ ಮಾಡಿದ್ದಾರೆ.

ರಾಜ್ಯದ ಪ್ರಮುಖ ಸ್ಥಳಗಳಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್  ಅವರ ಪ್ರತಿಮೆ ಸ್ಥಾಪನೆ, ಪಠ್ಯಪುಸ್ತಕಗಳಲ್ಲಿ ಜೀವನ ಚರಿತ್ರೆ ಅಳವಡಿಕೆ,  ಕೈಗಾರಿಕಾ  ಹಾಗೂ  ಪ್ರತಿ ವಷ೯ ಜೂನ್ 4 ರಂದು ಜ‌ನ್ಮ ದಿನಾಚರಣೆಯನ್ನು ಸರಕಾರದ ವತಿಯಿಂದಲೇ ಆಚರಣೆ ಮಾಡುವಂತೆ ಕೋರಿದ್ದಾರೆ.

ರಾಜ್ಯದ ಪ್ರಮುಖ ಸ್ಥಳಗಳಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ‌ಅವರ ಪ್ರತಿಮೆಯನ್ನು ನಿರ್ಮಿಸಿರುವುದರಿಂದ   ದೇಶ – ವಿದೇಶಗಳಿಂದ ಆಗಮಿಸುವ ಪ್ರವಾಸಿಗರಿಗೆ ಅವರ ವ್ಯಕಿತ್ವವನ್ನು ಪರಿಚಯಿಸಲು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ. ಇವರ ಕಾಲದಲ್ಲಿ ಮೈಸೂರು ರಾಜ್ಯದಲ್ಲಿ ಹೆಸರಿಗೆ ಮಾತ್ರ ಇದ್ದ ‘ಪ್ರಜಾ ಪ್ರತಿನಿಧಿ ಸಭೆ’ಯು ನೂತನ ರೂಪವನ್ನು ಪಡೆದು, ನಿಜವಾದ ಜನ ಪ್ರತಿನಿಧಿ ಸಭೆಯಾಗಿ ಪರಿವರ್ತನೆಯಾಯಿತು.

ಏಷ್ಯಾ ಖಂಡದಲ್ಲೇ ಮೊದಲ ಜಲ ವಿದ್ಯುತ್ ಯೋಜನೆಯನ್ನು ಪ್ರಾರಂಭಿಸಿದ ಕೀರ್ತಿ ನಾಲ್ವಡಿಯವರದು. ಇದರ ಫಲಿತಾಂಶವಾಗಿ 1905 ಆಗಸ್ಟ್ 3 ರಂದು ಪ್ರಥಮವಾಗಿ ಬೆಂಗಳೂರಿನಲ್ಲಿ ದೀಪಗಳು ಬೆಳಗಿದವು. ಅವರ ಮತ್ತೊಂದು ಮಹತ್ತರ ಸಾಧನೆ ಎಂದರೆ, ಮೈಸೂರು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದ್ದು  ಒಡೆಯರ್ ಅವರ ಮತ್ತೊಂದು ಮೈಲಿಗಲ್ಲು ಎಂದು ಸಚಿವ ಮುರುಗೇಶ್ ನಿರಾಣಿ ಅವರು ಬಣ್ಣಿಸಿದ್ದಾರೆ.

ದೇಶದಲ್ಲೇ ಮೊಟ್ಟಮೊದಲ ಬಾರಿಗೆ  ವಿಶ್ವವಿದ್ಯಾನಿಲಯವನ್ನು ಮೈಸೂರಿನಲ್ಲಿ ತೆರೆದು ದಾಖಲೆ ನಿರ್ಮಿಸಿದ ಕೀರ್ತಿ ನಾಲ್ವಡಿಯವರಿಗೆ ಸಲ್ಲುತ್ತದೆ. ಅವರ ಕಾಲದಲ್ಲಿ ರಾಜ್ಯದ ನಾನಾ ಭಾಗಗಳಲ್ಲಿ 27೦ ಉಚಿತ ಆಸ್ಪತ್ರೆಗಳು ಕಾರ್ಯಾರಂಭ ಮಾಡಿದವು. ಬೆಂಗಳೂರಿನ ಮಿಂಟೊ ಕಣ್ಣಾಸ್ಪತ್ರೆ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿತ್ತು. ಮೈಸೂರಿನ ಕ್ಷಯರೋಗ ಆಸ್ಪತ್ರೆ ಉತ್ತಮಗೊಂಡಿತು. ವಾಣಿಜ್ಯ ಕ್ಷೇತ್ರದಲ್ಲಿ ಮೈಸೂರು ಬ್ಯಾಂಕ್ ಖಾಸಗೀ ಸಹಭಾಗಿತ್ವದೊಡನೆ ಕಾರ್ಯಾರಂಭ ಮಾಡಿತು. ಈ ಎಲ್ಲಾ ಸಾಧನೆಯನ್ನು ಪರಿಗಣಿಸಿ ಸರಕಾರ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಅವರಿಗೆ ಬರೆದಿರುವ ಪತ್ರದಲ್ಲಿ ನಿರಾಣಿ ಅವರು ಮನವಿ ಮಾಡಿದ್ದಾರೆ.

Key words:  minister- Murugesh R Nirani –letter-CM- BS Yediyurappa- Shri Nalwadi Krishnaraja Wadiyar.

ENGLISH SUMMARY….

NIRANI WANTS GOVT TO RESTORE THE LEGACY OF NALWADI KRISHNARAJA WADIYAR, WRITES LETTER TO BSY

• Minister wants govt to celebrate Nalwadi Krishnaraja Wadiyar Jayanti
• Nirani requests CM to install Wadiyar statues across the state
• Nirani says future generations should learn about Wadiyar
• Minister wants govt to include lessons on Wadiyar in textbooks

Bengaluru: Mines & Geology Minister and Kalaburgi district incharge minister Murugesh R Nirani has requested Chief Minister BS Yediyurappa to take steps to make future generations remember the legendary Mysore king Shri Nalwadi Krishnaraja Wadiyar. He made several suggestions including celebration of birth anniversary of Nalwadi Krishnaraja Wadiyar who laid the foundation for modern industrial growth in Karnataka.

Nirani in his letter to Yediyurappa on the occasion of 137th birth anniversary of Nalwadi Krishnaraja Wadiyar, opined that it was necessary to make future generations learn the greatness of the Maharaja. “Steps should be taken to include lessons on Shri Nalwadi Krishnaraja Wadiyar in the text books for primary school, high school, pre-university and degree colleges. State government should conduct his birth anniversary events & June 4 as Nalwadi Krishnaraja Wadiyar Jayanti. The birth anniversary of Shri Wadiyar who started many industries should also be celebrated as ‘Industries Day’ in the state, Nirani suggested.

The Mines and Geology Minister also requested the government to erect statues of Nalwadi Krishnaraja Wadiyar at important locations across the state. “Statues of Nalwadi Krishnaraja Wadiyar will help tourists learn about his greatness. It was during his time that the idle ‘Praja Prathinidhi Sabha’ was transformed into the real forum of people’s representatives,” Nirani said in his letter.

Lauding Wadiyar’s pioneering achievements in the erstwhile Mysore State, Nirani said the credit must go to Nalwadi Krishnaraja Wadiyar for starting Asia’s first hydro power project. He further added that Bengaluru got street lights in 1905 due to his efforts. Setting up of Mysore University was another great achievement of Wadiyar, extolled Nirani.

Elaborating Wadiyar’s contributions, Minister Nirani said hundreds of hospitals were constructed due to his efforts. “ Shri Wadiyar built 270 hospitals across the state. Minto eye hospital in Bengaluru had attained global fame and tuberculosis hospital in Mysuru was modified and the Mysore bank functioned with private partnership. Government should consider all these factors and take steps to restore his legacy,” Nirani requested in his letter to Chief Minister.