Tuesday, September 22, 2026

BDA Apartments

ಆರ್’ಸಿಬಿ ಗೆಲುವಿಗಾಗಿ ಚಾಮುಂಡಿಬೆಟ್ಟದಲ್ಲಿ ನಾಡದೇವತೆಗೆ ಪೂಜೆ ಸಲ್ಲಿಸಿದ ...
Home Front Page ಆರ್’ಸಿಬಿ ಗೆಲುವಿಗಾಗಿ ಚಾಮುಂಡಿಬೆಟ್ಟದಲ್ಲಿ ನಾಡದೇವತೆಗೆ ಪೂಜೆ ಸಲ್ಲಿಸಿದ ಅಭಿಮಾನಿಗಳು

ಆರ್’ಸಿಬಿ ಗೆಲುವಿಗಾಗಿ ಚಾಮುಂಡಿಬೆಟ್ಟದಲ್ಲಿ ನಾಡದೇವತೆಗೆ ಪೂಜೆ ಸಲ್ಲಿಸಿದ ಅಭಿಮಾನಿಗಳು

ಬೆಂಗಳೂರು. ಸೆಪ್ಟೆಂಬರ್ 29, 2021 (www.justkannada.in): ಅಧಿದೇವತೆ ತಾಯಿ ಚಾಮುಂಡೇಶ್ವರಿ ಸನ್ನಿಧಾನಕ್ಕೆ ಆರ್ಸಿಬಿ ಫ್ಯಾನ್ಸ್‌ಗಳು ತೆರಳಿ ತಾಯಿಗೆ ಪೂಜೆ ಸಲ್ಲಿಸಿ ಈ ಬಾರಿ ಆರ್ ಸಿಬಿ ಕಪ್ ಗೆಲ್ಲಿಸುವಂತೆ ಪ್ರಾರ್ಥಿಸಿದ್ದಾರೆ.

ಚಾಮುಂಡಿ ಬೆಟ್ಟದ ಗೋಪುರದ ಬಳಿ ಆರ್ಸಿಬಿ ಬಾವುಟ ಹಾರಿಸಿ ನಾಡ ದೇವತೆಗೆ ಕರ್ಪೂರ ಬೆಳಗಿ ತೆಂಗಿನ ಕಾಯಿ ಹೊಡೆದು ಈ ಸಲ ಕಪ್ ನಮ್ದೆ ಎಂದು ಕೂಗುತ್ತ ಪೂಜೆ ಸಲ್ಲಿಸಿದ್ದಾರೆ ಅಭಿಮಾನಿಗಳು ಈ ವಿಡೀಯೋ ಸಾಕಷ್ಟು ವೈರಲ್ ಕೂಡ ಆಗಿದೆ.

ಆರ್ಸಿಬಿ ಫ್ಲ್ಯಾಗ್ ಹಿಡಿದು ಮಂಗಳಾರತಿ ಮಾಡಿ ಈಡುಗಾಯಿ ಹೊಡೆದ ಅಭಿಮಾನಿಗಳು ಕೊಯ್ಲಿ ಪಡೆ ಈ ಬಾರಿಯಾದರೂ ಕಪ್ ಗೆಲ್ಲುವಂತೆ ಪ್ರಾರ್ಥನೆ ಮಾಡಿದ್ದಾರೆ.

key words: rcb fans done pooja at mysore chamundi betta