ಟೀಮ್ ಇಂಡಿಯಾ ಬಳಿಕ ಆರ್’ಸಿಬಿ ಕೋಚ್ ಆಗಲು ರವಿಶಾಸ್ತ್ರಿ ಚಿತ್ತ?!

ಬೆಂಗಳೂರು, ಅಕ್ಟೋಬರ್ 21, 2021 (www.justkannada.in): ಟೀಮ್ ಇಂಡಿಯಾ ಕೋಚ್​ ಹುದ್ದೆಯನ್ನು ತ್ಯಜಿಸಿದ ಬಳಿಕ ರವಿ ಶಾಸ್ತ್ರಿ ಮತ್ತೊಮ್ಮೆ ಕೋಚ್​ ಆಗಲು ಬಯಸಿದ್ದಾರೆ.

ಹೌದು. ಈ ಬಾರಿ ಆರ್ ಸಿಬಿ ತಂಡಕ್ಕೆ ರವಿಶಾಸ್ತ್ರಿ ಕೋಚ್ ಆಗಲು ಬಯಸಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
ದೇಶ-ವಿದೇಶಗಳಲ್ಲಿ ಭಾರತ ತಂಡದ ಪ್ರದರ್ಶನ ಅದ್ಭುತವಾಗಿದೆ. ಇದೇ ಕಾರಣದಿಂದಾಗಿ ರವಿ ಶಾಸ್ತ್ರಿಯನ್ನು ಯಶಸ್ವಿ ಕೋಚ್ ಆಗಿ ಪರಿಗಣಿಸಲಾಗುತ್ತದೆ.

ಇದೀಗ ಟೀಂ ಇಂಡಿಯಾ ಕೋಚ್ ಆಗಿ ಸೇವೆ ಸಲ್ಲಿಸುವ ಅವಧಿ ಮುಕ್ತಾಯ ಹಂತಕ್ಕೆ ಬಂದಿದ್ದು, ಮುಂದೆ ಆರ್ ಸಿಬಿ ತಂಡಕ್ಕೆ ತರಬೇತಿ ನೀಡುವ ಬಯಕೆಯನ್ನು ರವಿಶಾಸ್ತ್ರಿ ಹೊಂದಿದ್ದಾರೆ ಎನ್ನಲಾಗಿದೆ.

ಐಪಿಎಲ್ ಮೂಲಕ 2ನೇ ಇನಿಂಗ್ಸ್​ ಆರಂಭಿಸುವ ಇರಾದೆಯಲ್ಲಿದ್ದಾರೆ ರವಿ ಶಾಸ್ತ್ರಿ. ಮೂಲಗಳ ಮಾಹಿತಿ ಪ್ರಕಾರ, ರವಿ ಶಾಸ್ತ್ರಿ ಆರ್​ಸಿಬಿ ತಂಡದ ಕೋಚ್​ ಆಗಲು ಬಯಸಿದ್ದಾರೆ.

ಆರ್​ಸಿಬಿ ತಂಡದ ಕೋಚ್ ಹುದ್ದೆ ಕೂಡ ಖಾಲಿ ಇದೆ. ಆಸ್ಟ್ರೇಲಿಯಾದ ಸೈಮನ್ ಕಾಟಿಚ್ ದ್ವಿತಿಯಾರ್ಧದ ಐಪಿಎಲ್ ವೇಳೆ ಹೊರಗುಳಿದಿದ್ದರು.