ಮಹೇಶ್ ಬಾಬುಗೆ ಆರ್ಗ್ಯಾನಿಕ್​ ಆಹಾರ ಪದಾರ್ಥ ಗಿಫ್ಟ್ ಮಾಡಿದ ರಶ್ಮಿಕಾ

ಬೆಂಗಳೂರು, ಜೂನ್ 30, 2020 (www.justkannada.in):  ನಟಿ ರಶ್ಮಿಕಾ ಪ್ರಿನ್ಸ್ ಮಹೇಶ್ ಬಾಬು ಅವರಿಗೆ ಸ್ಪೆಷಲ್ ಗಿಫ್ಟ್ ವೊಂದನ್ನು ಕಳುಹಿಸಿದ್ದಾರೆ.

ಹೌದು. ಲಾಕ್​ಡೌನ್​ ವೇಳೆ ರಶ್ಮಿಕಾ ತಮ್ಮ ತೋಟದಲ್ಲಿ ಬೆಳೆದ ಬಟರ್​ ಫ್ರೂಟ್​, ಸಿಹಿಯಾದ ಜೇನು ತುಪ್ಪ, ಮಾವಿನಹಣ್ಣಿನ ಉಪ್ಪಿನಕಾಯಿ ಸೇರಿದಂತೆ ಕೆಲವು ಆರ್ಗ್ಯಾನಿಕ್​ ಆಹಾರ ಪದಾರ್ಥಗಳನ್ನು ಪ್ರಿನ್ಸ್​ ಮಹೇಶ್​ ಬಾಬು ಅವರ ಮನೆಗೆ ಕೊಡಗಿನಿಂದ ಕಳುಹಿಸಿದ್ದಾರೆ.

ರಶ್ಮಿಕಾ ನೀಡಿದ ಉಡುಗೊರೆಯಿಂದಾಗಿ ಪ್ರಿನ್ಸ್​ ಪತ್ನಿ ನಮ್ರತಾರ ಮುಖದಲ್ಲಿ ಮಂದಹಾಸ ಮೂಡಿದೆ. ಇದು ನಮ್ಮ ಮೊದಲ ಮಾನ್ಸೂನ್​ ಹಾಗೂ ಲಾಕ್​ಡೌನ್​ ಉಡುಗೊರೆ ಎಂದಿರುವ ನಮ್ರತಾ, ರಶ್ಮಿಕಾಗೆ ಧನ್ಯವಾದ ತಿಳಿಸಿದ್ದಾರೆ.