Saturday, August 22, 2026

BDA Apartments

Home Cinema ವಿಜಯ್ ದೇವರಕೊಂಡ ನಿರ್ಮಾಣದ ಚಿತ್ರಕ್ಕೆ ರಶ್ಮಿಕಾ ನಾಯಕಿ !

ವಿಜಯ್ ದೇವರಕೊಂಡ ನಿರ್ಮಾಣದ ಚಿತ್ರಕ್ಕೆ ರಶ್ಮಿಕಾ ನಾಯಕಿ !

ಬೆಂಗಳೂರು, ಜೂನ್ 25, 2019 (www.justkannada.in): ವಿಜಯ್ ದೇವರಕೊಂಡ ನಿರ್ಮಾಣದ ಚಿತ್ರಕ್ಕೆ ರಶ್ಮಿಕಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ವಿಜಯ್ ದೇವರಕೊಂಡ ಕಳೆದ ವರ್ಷ ‘ಕಿಂಗ್ ಆಫ್ ದಿ ಹಿಲ್’ ನಿರ್ಮಾಣ ಸಂಸ್ಥೆ ತೆರೆದಿದ್ದಾರೆ. ತಮ್ಮ ಬ್ಯಾನರ್ ನಲ್ಲಿ ಉತ್ತಮ ಸಿನಿಮಾಗಳನ್ನು ಮಾಡುವ ಉದ್ದೇಶ ಇಟ್ಟು ಕೊಂಡಿರುವ ವಿಜಯ್ ಒಂದೊಳ್ಳೆ ಕಥೆಗಾಗಿ ಕಾಯುತ್ತಿದ್ದರು.

ಅವರಿಗೆ ಈಗ ಉತ್ತಮ ಕಥೆ ಸಿಕ್ಕಿದೆಯಂತೆ. ವಿಜಯ್ ಬ್ಯಾನರ್ ನಿಂದ ಮೂಡಿ ಬರುತ್ತಿರುವ ಸಿನಿಮಾಗೆ ರಶ್ಮಿಕಾ ನಾಯಕಿಯಾಗಿ ಅಭಿನಯಿಸಲಿದ್ದಾರಂತೆ. ಆದ್ರೆ ನಾಯಕ ಮತ್ತು ನಿರ್ದೇಶಕರ ಬಗ್ಗೆ ಸ್ಪಷ್ಟವಾಗಿ ಯಾವುದೆ ಮಾಹಿತಿ ಹೊರಬಿದ್ದಿಲ್ಲ.