ರಾಸಲೀಲೆ ಸಿಡಿ ಬಿಡುಗಡೆ ಪ್ರಕರಣ: ಕಾನೂನು ಚೌಕಟ್ಟಿನಲ್ಲಿ ಎಸ್ ಐಟಿ ತನಿಖೆ- ಪೊಲೀಸ್ ಆಯುಕ್ತ ಕಮಲ್ ಪಂತ್….

0
109

ಬೆಂಗಳೂರು,ಮಾರ್ಚ್,12,2021(www.justkannada.in): ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸರನ್ನೊಳಗೊಂಡ  ತಂಡ ರಚನೆ ಮಾಡಿದ್ದೇವೆ. ಕಾನೂನು ಚೌಕಟ್ಟಿನಲ್ಲಿ ತನಿಖೆ ಮಾಡಲಾಗುತ್ತಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದರು.jk

ಈ ಕುರಿತು ಇಂದು ಮಾತನಾಡಿದ ಪೊಲೀಸ್ ಆಯುಕ್ತ ಕಮಲ್ ಪಂತ್,  ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ನೇತೃತವದಲ್ಲಿ  7 ಜನರ ತಂಡವನ್ನ ರಚಿಸಿದ್ದೇವೆ. ಡಿಸಿಪಿ  ಅನುಚೇತ್ , ಡಿಸಿಪಿ ರವಿಕುಮಾರ್,  ಎಸಿಪಿ ಧರ್ಮೇಂದ್ರ,  ಇನ್ಸ್ ಪೆಕ್ಟರ್ ಪ್ರಶಾಂತ್ ಬಾಬು, ಇನ್ಸ್ ಪೆಕ್ಟರ್ ಮಾರುತಿ ಸೇರಿ 7 ಜನರ ತಂಡ ರಚಿಸಲಾಗಿದೆ ಎಂದರು.rasalee-cd-release-case-sit-investigation-legal-police-commissioner-kamal-pant

ಕಾನೂನು ಚೌಕಟ್ಟಿನಲ್ಲಿ  ಎಸ್ ಐಟಿ ತನಿಖೆ ನಡೆಯುತ್ತದೆ.  ಯಾವ ರೀತಿ ತನಿಖೆ ಎಂದು ಸದ್ಯಕ್ಕೆ ಚರ್ಚೆ ಮಾಡಿಲ್ಲ ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದರು.

Key words: Rasalee –CD- release- case-SIT -investigation -legal -Police Commissioner- Kamal Pant