Thursday, August 6, 2026

BDA Apartments

Home Front Page ಅತ್ಯಾಚಾರಿಗಳಿಗೆ ದುಬೈ ಮಾದರಿಯಲ್ಲಿ ಶಿಕ್ಷೆಯಾಗಬೇಕು- ಸಚಿವ ಆನಂದ್ ಸಿಂಗ್.

ಅತ್ಯಾಚಾರಿಗಳಿಗೆ ದುಬೈ ಮಾದರಿಯಲ್ಲಿ ಶಿಕ್ಷೆಯಾಗಬೇಕು- ಸಚಿವ ಆನಂದ್ ಸಿಂಗ್.

 ಬೆಂಗಳೂರು,ಆಗಸ್ಟ್,27,2021(www.justkannada.in):  ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್‌  ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಅತ್ಯಾಚಾರಿಗಳಿಗೆ  ದುಬೈ ಮಾದರಿಯಲ್ಲಿ ಶಿಕ್ಷೆಯಾಗಬೇಕು ಎಂದಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಮಾತನಾಡಿದ ಸಚಿವ ಆನಂದ್ ಸಿಂಗ್,  ಪ್ರವಾಸೋದ್ಯಮ ತಾಣಗಳಲ್ಲಿ ಸುರಕ್ಷತೆ ಇಲ್ಲ. ಮೂಲಭೂತ ಸೌಕರ್ಯ ನೀಡಲು ಹೋದರೆ ಅದನ್ನ ಖಾಸಗೀಕರಣ ಎಂದು ವಿರೋಧ ಮಾಡ್ತಾರೆ.  ಇತಂಹ ಘಟನೆ ಆಗಬಾರದು. ಆತ್ಯಾಚಾರಿಗಳಿಗೆ ದುಬೈ ಮಾದರಿಯಲ್ಲಿ ಶಿಕ್ಷೆಯಾಗಬೇಕು. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾರಿ ಕಷ್ಟ ಎಂದು ಹೇಳಿದರು.

ಗಣೇಶ ಹಬ್ಬ ವಿಚಾರ ಕುರಿತು ಮಾತನಾಡಿದ ಸಚಿವ ಆನಂದ್ ಸಿಂಗ್, ಅರಿಶಿನ ಗಣಪತಿ ತಯಾರಿಸಿ ವಿಶ್ವದಾಖಲೆಗೆ ಮುಂದಾಗಿದ್ದೇವೆ. ಕರ್ನಾಟಕ ರಾಜ್ಯದ ಜನರು ಇದಕ್ಕೆ ಕೈಜೋಡಿಸಬೇಕು ಎಂದು ಪರಿಸರ ಖಾತೆ ಸಚಿವ ಆನಂದ್ ಸಿಂಗ್ ಮನವಿ ಮಾಡಿದ್ದಾರೆ.

Key words: rapists- Dubai- punished – Minister- Anand Singh