Friday, October 2, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ಮೋದಿ ಸರ್ಕಾರ ಏ.1 ರಂದು ಜನರ ಜೇಬು ಕತ್ತರಿಸುವ ಕೆಲಸ ಮಾಡಿದೆ- ರಣದೀಪ್ ಸಿಂಗ್ ಸುರ್ಜೇವಾಲ

ಮೋದಿ ಸರ್ಕಾರ ಏ.1 ರಂದು ಜನರ ಜೇಬು ಕತ್ತರಿಸುವ ಕೆಲಸ ಮಾಡಿದೆ- ರಣದೀಪ್ ಸಿಂಗ್ ಸುರ್ಜೇವಾಲ

ಬಾಗಲಕೋಟೆ,ಏಪ್ರಿಲ್,1,2026 (www.justkannada.in):  ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ  ಏಪ್ರಿಲ್ 1 ರಂದು ಜನರ ಜೇಬು ಕತ್ತರಿಸುವ ಕೆಲಸ ಮಾಡಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್  ಸುರ್ಜೇವಾಲ ವಾಗ್ದಾಳಿ ನಡೆಸಿದರು.

ಬಾಗಲಕೋಟೆಯಲ್ಲಿ ಇಂದು ಮಾತನಾಡಿದ ರಣದೀಪ್ ಸಿಂಗ್ ಸುರ್ಜೇವಾಲ, ರಾಜ್ಯದ ಎರಡು ವಿಚಾರದ ಮೇಲೆ ಉಪಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ವಿಕಾಸ, ಜನಕಲ್ಯಾಣದ ಮೇಲೆ ಚುನಾವಣೆ ಎದುರಿಸುತ್ತಿದೆ. ದ್ವೇಷ ಒಡೆದು ಆಳುವ ನೀತಿ ಮೇಲೆ ಬಿಜೆಪಿ ಚುನಾವಣೆ ಮಾಡುತ್ತಿದೆ. ಗ್ಯಾರಂಟಿ ಯೋಜನೆ ರದ್ದು ಮಾಡುವುದು ಬಿಜೆಪಿ ಅಜೆಂಡಾ ಎಂದು ಕಿಡಿಕಾರಿದರು.

ಏಪ್ರಿಲ್ 1ಕ್ಕೆ ಆಂಗ್ಲರು  ಏಪ್ರಿಲ್ ಫೂಲ್ ಎಂದು ಕರೆಯುತ್ತಿದ್ದರು ಅದರೆ ನಾವು ಹಾಗೆ ಕರೆಯುವುದಿಲ್ಲ ಮೋದಿ ಸರ್ಕಾರ ಏ. 1 ರಂದು ಜನರ ಜೇಬು ಕತ್ತರಿಸುವ ಕೆಲಸ  ಮಾಡಿದೆ. ಬಸ್, ರೈಲ್ವೆ ನಿಲ್ದಾಣದಲ್ಲಿ ಜೇಬುಗಳ್ಳರಿದ್ದಾರೆ ಎಂದು ಬರೆದಿರುತ್ತೆ. ನಾವು ಬಿಜೆಪಿ ಕಿಸೆ ಕಳ್ಳತನ ಮಾಡುತ್ತಿದೆ ಹುಷಾರಾಗಿರಿ ಎಂದು ಹೇಳುತ್ತಿದ್ದೇವೆ.  ಆ ಕೆಲಸಕ್ಕಾಗಿ ಬಿಜೆಪಿಗರು ಏಪ್ರಿಲ್ 1 ತಾರೀಖು  ಮೀಸಲಿಟ್ಟಿದ್ದಾರೆ.  3ನೇ ಬಾರಿಗೆ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾಗಿದೆ. ಇದೇ ಮೊದಲ ಬಾರಿಗೆ ಗ್ಯಾಸ್ ಸಿಲಿಂಡರ್ 2 ಸಾವಿರ ರೂ.  ದಾಟಿದೆ  ಎಂದು ರಣದೀಪ್ ಸಿಂಗ್ ಸುರ್ಜೇವಾಲ ತಿಳಿಸಿದ್ದಾರೆ.

Key words: Modi government, people, pockets, April 1, Randeep Singh Surjewala