ಆಡಳಿತ ಸುಧಾರಣೆ ಬಗ್ಗೆ ಚರ್ಚೆ: ಶಾಸಕರು ಸಾಕಷ್ಟು ಸಮಸ್ಯೆ ಹೇಳುತ್ತಿದ್ದಾರೆ- ರಣದೀಪ್ ಸಿಂಗ್ ಸುರ್ಜೇವಾಲ

ಬೆಂಗಳೂರು,ಜುಲೈ,7,2025 (www.justkannada.in): ಪದೇ ಪದೇ ರಾಜ್ಯಕ್ಕೆ ಆಗಮಿಸುತ್ತಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಕಾಂಗ್ರೆಸ್ ಶಾಸಕರ ಜೊತೆ ಸಭೆ ನಡೆಸಿ ಸಮಸ್ಯೆಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಇಂದು ಸಹ ಕಾಂಗ್ರೆಸ್ ಶಾಸಕರ ಜೊತೆ ರಣದೀಪ್ ಸಿಂಗ್ ಸುರ್ಜೇವಾಲ ಸಭೆ ನಡೆಸಿದ್ದು ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಚರ್ಚಿಸಿದ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು.

ಈ ಕುರಿತು ಮಾತನಾಡಿದ ಅವರು, ನಮ್ಮ ಶಾಸಕರ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸ ಹೇಗಿದೆ.  ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿದೆಯಾ..?   ಶಾಸಕರ 2 ವರ್ಷದ ಆಡಳಿತ ವೈಖರಿ ಹೇಗಿತ್ತು ಎಂಬ ವಿಚಾರ, ಹಾಗೂ ಆಡಳಿತ ಸುಧಾರಣೆ ಕುರಿತು ಶಾಸಕರ ಜೊತೆ ಚರ್ಚೆ ಮಾಡಿದ್ದೇನೆ.  ಶಾಸಕರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಸಾಕಷ್ಟು ಪ್ರಶ್ನೆಗಳನ್ನ ಮುಂದಿಟ್ಟು ಉತ್ತರ ಪಡೆಯುತ್ತಿದ್ದೇವೆ. ಸಾಕಷ್ಟು ಸಮಸ್ಯೆಗಳನ್ನ ಶಾಸಕರು ಹೇಳುತ್ತಿದ್ದಾರೆ.  ಶಾಸಕರಿಂದ ಲಿಖಿತ ರೂಪದಲ್ಲಿ ಮಾಹಿತಿ ತೆಗೆದುಕೊಳ್ಳುತ್ತೇವೆ ಎಂದು  ತಿಳಿಸಿದರು.

vtu

Key words: Discussion, administrative, MLAs, Randeep Singh Surjewala