Friday, September 18, 2026

BDA Apartments

Home Front Page ಬೆಂಗಳೂರಿಗೆ ರಾಮನಗರ ಜಿಲ್ಲೆ ಸೇರ್ಪಡೆ ವಿಚಾರ: ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಪ್ರತಿಕ್ರಿಯೆ ಏನು..?

ಬೆಂಗಳೂರಿಗೆ ರಾಮನಗರ ಜಿಲ್ಲೆ ಸೇರ್ಪಡೆ ವಿಚಾರ: ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಪ್ರತಿಕ್ರಿಯೆ ಏನು..?

ಬೆಂಗಳೂರು,ಅಕ್ಟೋಬರ್,25,2023(www.justkannada.in): ಬೆಂಗಳೂರು ಜಿಲ್ಲೆಗೆ ರಾಮನಗರ ಜಿಲ್ಲೆ ಸೇರ್ಪಡೆ  ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆಗೆ  ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಿ.ಪಿ ಯೋಗೇಶ್ವರ್, ಆಡಳಿತದ ದೃಷ್ಟಿಯಿಂದ ರಾಮನಗರ ಜಿಲ್ಲೆ ಇರುವುದೇ ಸೂಕ್ತ. ಸರ್ಕಾರಿ ಕೆಲಸಕ್ಕೆ ಬೆಂಗಳೂರಿಗೆ ಬಂದು ಹೋಗೋದು ದೊಡ್ಡ ಸವಾಲು. ಬೆಂಗಳೂರು ನಗರದಲ್ಲಿ ಒಕ್ಕಲಿಗ ಸಮುದಾಯದವರು ಜಾಸ್ತಿ ಇದ್ದಾರೆ. ಆಡಳಿತದ ಹತೋಟಿ ಕೈತಪ್ಪಿ ಹೋಗುತ್ತೆ ಅಂತಾ ಮನಸ್ಸಿನಲ್ಲಿ ಇರಬಹುದು. ಅದು ರಾಜಕೀಯ ‌ಮಹಾತ್ವಾಕಾಂಕ್ಷೆ ಇರುವ ವ್ಯಕ್ತಿ ಆಡುವ ಮಾತು ಎಂದು ಹೇಳಿದರು.ಬೆಂಗಳೂರಿಗೆ ರಾಮನಗರ ಜಿಲ್ಲೆ ಸೇರ್ಪಡೆ ವಿಚಾರ cpy

ಡಿಸಿಎಂ ಡಿ.ಕೆ.ಶಿವಕುಮಾರ್​ಗೆ ಏನು ತೊಂದರೆ ಇದೆ ಅಂತಾ ಗೊತ್ತಿಲ್ಲ. ಮುಂದೆ ರಾಮನಗರ ಜಿಲ್ಲೆಯ ಜನರು ಪ್ರತಿಭಟನೆ ಮಾಡಬಹುದು ಎಂದು ಬಿಜೆಪಿ ಎಂಎಲ್​ಸಿ  ಸಿ.ಪಿ.ಯೋಗೇಶ್ವರ್  ಎಚ್ಚರಿಕೆ ನೀಡಿದರು.

Key words: Ramnagar -district -addition –Bangalore- reaction – former minister- CP Yogeshwar