ಡಾ.ಎಂ.ಮರೀಗೌಡ ಅವರು ಕರ್ನಾಟಕದ ತೋಟಗಾರಿಕೆ ಕ್ಷೇತ್ರದ ಅಭಿವೃದ್ಧಿಯ ರೂವಾರಿ –ಸಿಎಂ ಸಿದ್ದರಾಮಯ್ಯ

ಮೈಸೂರು, ಅಕ್ಟೋಬರ್ 25,2023(www.justkannada.in): ತೋಟಗಾರಿಕೆ ಪಿತಾಮಹ ಡಾ.ಎಂ.ಹೆಚ್.ಮರೀಗೌಡ ಅವರ ಕಾಲದಲ್ಲಿ ಕರ್ನಾಟಕದಲ್ಲಿ ತೋಟಗಾರಿಕಾ ಕ್ಷೇತ್ರ ಅಭಿವೃದ್ಧಿಯ ರೂವಾರಿಯಾಗಿದ್ದರು. ಸರ್ಕಾರಿ ಅಧಿಕಾರಿಯಾಗಿ ನಿಷ್ಠೆ ಹಾಗೂ ಬದ್ಧತೆಯಿಂದ ತೋಟಗಾರಿಕೆ ಕ್ಷೇತ್ರದ ಬೆಳವಣಿಗೆಗೆ ಶ್ರಮಿಸಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಂದು ತೋಟಗಾರಿಕೆ ಪಿತಾಮಹ ಡಾ.ಎಂ.ಹೆಚ್.ಮರೀಗೌಡ ಪ್ರತಿಮೆ ಅನಾವರಣಗೊಳಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ಧರಾಮಯ್ಯ, ಮೈಸೂರಿನ ಕೇಂದ್ರಸ್ಥಳದಲ್ಲಿರುವ ಕರ್ಜನ್ ಪಾರ್ಕ್ ನಲ್ಲಿ ಡಾ.ಎಂ.ಹೆಚ್.ಮರೀಗೌಡರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ಡಾ.ಎಂ.ಹೆಚ್.ಮರೀಗೌಡರ ಸಾಧನೆಗಳು ಎಲ್ಲರಿಗೂ ಸ್ಪೂರ್ತಿ ತರಲಿದೆ ಎಂದು ತಿಳಿಸಿದರು.

ಮಾಹಿತಿ ಪಡೆದು ಪರಿಶೀಲನೆ :

ಹುಲಿ ಉಗುರು ಧರಿಸಿದ ಬಗ್ಗೆ ನಟರಾದ ದರ್ಶನ್ ಹಾಗೂ ಜಗ್ಗೇಶ್ ಅವರ ಪ್ರಕರಣ ದಾಖಲಾಗಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ  ಉತ್ತರಿಸುತ್ತಾ, ಈ ಬಗ್ಗೆ  ಸಂಪೂರ್ಣ ಮಾಹಿತಿ ಇಲ್ಲ. ಪೊಲೀಸ್ ಇಲಾಖೆಯಿಂದ ಮಾಹಿತಿ ಪಡೆದು ಪರಿಶೀಲಿಸಲಾಗುವುದು ಎಂದು ತಿಳಿಸಿದರು.

Key words: Father of Horticulture -Dr. MH Marigowda –statue- unveiled– CM Siddaramaiah

ENGLISH SUMMARY…

Father of horticulture, Dr. M. Marigowda statue unveiled

Sculptor of Horticulture Sector in Karnataka : Chief Minister Siddaramaiah

Mysore, October 25:

Chief Minister Siddaramaiah said that Dr. M.H. Marigowda, known as father of horticulture , was the sculptor of horticultural sector in Karnataka during his period. As a government official, he worked hard for the growth of horticulture sector with loyalty and commitment.

He was speaking to the media after unveiling the statue of the father of Horticulture Dr. M.H. Marigowda, here today.

A bronze statue of Dr. M.H Mari Gowda was unveiled at Curzon Park in the heart of Mysuru. He said that the achievements of Dr. M
H Mari Gowda is an inspiration to everyone.

Responding to the media’s question about the case registered against actors Darshan and Jaggesh for wearing tiger claws, the CM said that he does not have complete information about the matter. He said he would obtain information from the police department and will look into the matter.