Wednesday, September 16, 2026

BDA Apartments

ರಮೇಶ್ ಸಿಡಿ ನಕಲಿಯೋ ಅಸಲಿಯೋ ಮೊದಲು ಗೊತ್ತಾಗಲಿ- ಡಿ.ಕೆ ಶಿವಕುಮಾರ್… BDA JK_Adv BDA Adv
Home Front Page ರಮೇಶ್ ಸಿಡಿ ನಕಲಿಯೋ ಅಸಲಿಯೋ ಮೊದಲು ಗೊತ್ತಾಗಲಿ- ಡಿ.ಕೆ ಶಿವಕುಮಾರ್…

ರಮೇಶ್ ಸಿಡಿ ನಕಲಿಯೋ ಅಸಲಿಯೋ ಮೊದಲು ಗೊತ್ತಾಗಲಿ- ಡಿ.ಕೆ ಶಿವಕುಮಾರ್…

ಶಿವಮೊಗ್ಗ,ಮಾರ್ಚ್,13,2021(www.justkannada.in):  ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣ ಸಂಬಂಧ ಸಿಡಿ ನಕಲಿಯೋ ಅಸಲಿಯೋ ಮೊದಲು ಗೊತ್ತಾಗಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ರಾಸಲೀಲೆ ಸಿಡಿ ಬಿಡುಗಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಪ್ತನ ಮೂಲಕ ರಮೇಶ್ ಜಾರಕಿಹೊಳಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್, ಎಸ್.ಐಟಿ ತನಿಖೆ ಮಾಡಲಿ. ಟೀಂ ಚೆನ್ನಾಗಿದೆ. ರಮೇಶ್ ಸಿಡಿ ನಕಲಿಯೋ ಅಸಲಿಯೋ ಮೊದಲು ಗೊತ್ತಾಗಲಿ. ಸಿಡಿಯನ್ನ ಎಫ್ ಎಸ್ ಎಲ್ ಗೆ ಕಳಿಸಿಕೊಡಲಿ.  ತನಿಖೆ ಬಳಿಕ ಯಾರನ್ನಾದರೂ ಬಂಧಿಸಲಿ ಎಂದು ನುಡಿದರು. Ramesh  jarkiholi-CD – original-KPCC –president-DK Sivakumar.

ಬಿಜೆಪಿ ಸರ್ಕಾರ ಬಂದ ಮೇಲೆ ಸಿಡಿಗಳ ಬಗ್ಗೆ ಬಹಳ ಚರ್ಚೆಯಾಗುತ್ತಿದೆ. ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಯೋಗೇಶ್ವರ್ ಮಾತನಾಡಿದರು. ಹೆಚ್.ವಿಶ್ವನಾಥ್ ಮಾತನಾಡಿದರು. ಅವರ ಬಗ್ಗೆ ತನಿಖೆಯಾಗಲಿಲ್ಲ. ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದ್ದಾರೆ. ಮಾಡಲಿ ಬಿಡಿ ಎಂದರು.

Key words:  Ramesh  jarkiholi-CD – original-KPCC –president-DK Sivakumar.