ಸಿಡಿ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ: ನನ್ನನ್ನ ಸಿಲುಕಿಸುವ ಹುನ್ನಾರ- ವಿಡಿಯೋ ಮೂಲಕ ಕಿಂಗ್ ಪಿನ್ ನರೇಶ್ ಗೌಡ ಸ್ಪಷ್ಟನೆ…

ಬೆಂಗಳೂರು,ಮಾರ್ಚ್,18,2021(www.justkannada.in):  ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್ ಪಿನ್ ನರೇಶ್ ಗೌಡ ವಿಡಿಯೋವೊಂದನ್ನ ಬಿಡುಗಡೆ ಮಾಡಿದ್ದು ಅದರಲ್ಲಿ, ಸಿಡಿ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ. ನನ್ನನ್ನ ಪ್ರಕರಣದಲ್ಲಿ ಸಿಲುಕಿಸುವ ಹುನ್ನಾರ ನಡೆದಿದೆ ಎಂದು ಆರೋಪಿಸಿದ್ದಾರೆ.jk

ಇದೀಗ ಕಿಂಗ್ ಪಿನ್ ನರೇಶ್ ವೀಡಿಯೋ ರಿಲೀಸ್ ಮಾಡಿದ್ದು, ಸಿಡಿ ಪ್ರಕರಣದ ಸಂತ್ರಸ್ತೆ ನನ್ನನ್ನ ಸಂಪರ್ಕಿಸಿದ್ದು ನಿಜ. ಆದರೆ ಸಿಡಿ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ.  ನಾನು ಯಾವುದೇ ಹಣ ಕೂಡ ಪಡೆದಿಲ್ಲ. ನಾನು ತನಿಖೆಗೆ ಬಂದ್ರೆ ಏನಾಗುತ್ತೆಂದು ಗೊತ್ತು. ಹಾಗಾಗಿ ನಾನು ತನಿಖೆಗೆ ಹಾಜರಾಗಿಲ್ಲ. ಸಿಡಿ ಕೇಸ್ ಗೂ ನನಗೂ ಸಂಬಂಧವಿಲ್ಲ  ಎಂದು ಸ್ಪಷ್ಟನೆ ನೀಡಿದ್ದಾರೆ.

ಹಾಗೆಯೇ ಯುವತಿ ಜೊತೆ ಸಂಪರ್ಕ ಇದ್ದಿದ್ದು ಸತ್ಯ. ಸ್ನೇಹಿತರಿಂದ ನಂಬರ್ ಪಡೆದು, ನನ್ನ ಸಂಪರ್ಕಿಸಿದ್ದು ನಿಜ. ಆದರೆ ಆ ವೇಳೆಯಲ್ಲೇ ನನ್ನ ತಾಯಿಗೆ  ಆರೋಗ್ಯ ಸರಿ ಇರಲಿಲ್ಲ. ಹೀಗಾಗಿ ನಾನು ಸರಿಯಾಗಿ ಮಾತನಾಡಿರಲಿಲ್ಲ. ಬಳಿಕ ಮಾಜಿ ಸಚಿವರು ನನಗೆ ಅನ್ಯಾಯ ಮಾಡಿದ್ದಾರೆ ನ್ಯಾಯ ಕೊಡಿಸಿ ಎಂದು ಆ ಹುಡುಗಿ ನನ್ನನ್ನು ಕೇಳಿಕೊಂಡಿದ್ದರು. ಅದಕ್ಕೆ ನಾನು ಬೇಕಾದ ಸಾಕ್ಷ್ಯಾಧಾರಗಳನ್ನು ಕೇಳಿದ್ದೆ.ramesh jarkiholi-CD case-King Pin -Naresh Gowda - video -release

ಈ ಮಧ್ಯೆ ನನ್ನ ಮಗುವಿನ ನಾಮಕರಣವಿತ್ತು. ಆ ಸಮಯದಲ್ಲಿ ಆ ಯುವತಿ ಫೋನ್ ಮಾಡಿದ್ದು,. ಆಗ ನಾನು ನನ್ನ ಮಗುವಿನ ನಾಮಕರಣವಿದೆ ಎಂದು ಹೇಳಿದ್ದೆ. ಹಾಗಾದರೆ ನಾವು ಬರುವುದು ಬೇಡವೆ ಎಂದು ಹೇಳಿದ್ದರು. ಬನ್ನಿ ಎಂದಿದ್ದೆ. ಆ ಹುಡುಗಿಯೂ ಬಂದಿದ್ದಳು. ಆದರೆ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ ಎಂದು ನರೇಶ್ ಸ್ಪಷ್ಟಪಡಿಸಿದ್ದಾರೆ.

Key words: ramesh jarkiholi-CD case-King Pin -Naresh Gowda – video -release