ಸಚಿವ ಸಂಪುಟ ರಚನೆ ಮತ್ತು ಬಿಜೆಪಿ ಕೆಲ ಶಾಸಕ ಅಸಮಾಧಾನ ಕುರಿತು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದೇನು ಗೊತ್ತೆ…

ನವದೆಹಲಿ,ಆ,21,2019(www.justkannada.in): ಸಚಿವ ಸ್ಥಾನ ಹಂಚಿಕೆಗೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.

ನವದೆಹಲಿಯಲ್ಲಿ ರಾಜ್ಯ ಬಿಜೆಪಿ ಸರ್ಕಾರದ ಸಚಿವ ಸಂಪುಟ ರಚನೆ ಮತ್ತು ಬಿಜೆಪಿ ಶಾಸಕ ಅಸಮಾಧಾನ ಕುರಿತು ನವದೆಹಲಿಯಲ್ಲಿ ಪ್ರತಿಕ್ರಿಯಿಸಿರುವ ಅನರ್ಹ ಶಾಸಕ  ರಮೇಶ್ ಜಾರಕಿಹೊಳಿ, ನಮಗೂ ಬಿಜೆಪಿಯಲ್ಲಿನ ಅಸಮಾಧಾನಕ್ಕೂ ಯಾವುದೇ ಸಂಬಂಧವಿಲ್ಲ. ಸದ್ಯ  ನವದೆಹಲಿಯಲ್ಲಿ ಎಲ್ಲಾ ಅನರ್ಹ ಶಾಸಕರು ಒಟ್ಟಾಗಿ ಸೇರುತ್ತೇವೆ. ನಾಳೆ ವಕೀಲರನ್ನ ಭೇಟಿಯಾಗಿ ಮಾಹಿತಿ ನೀಡುತ್ತೇವೆ ಎಂದರು.

ಹಾಗೆಯೇ ಕೋರ್ಟ್ ನಿಂದ ತೀರ್ಪು ಬರುವುದು ತಡವಾದರೇ ಮುಂದೆ ಚುನಾವಣೆ ಎದುರಿಸಲು  ಪ್ಲಾನ್ ಇದೆ. ನನ್ನ ತಮ್ಮ, ಮಕ್ಕಳು ಸಂಬಂಧಿಕರನ್ನ ಕಣಕ್ಕಿಳಿಸಲು ಪ್ಲಾನ್ ರೂಪಿಸಲಾಗಿದೆ. ನಾವು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾರನ್ನ ಭೇಟಿಯಾಗಲ್ಲ. ವಕೀಲರ ಭೇಟಿ ಬಳಿಕ ಬೆಂಗಳೂರಿಗೆ ವಾಪಸ್ ಬರುತ್ತೇವೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.

ಹಾಗೆಯೇ ಸಿ.ಪಿ ಯೋಗೇಶ್ವರ್ ನಮ್ಮ ಕ್ಯಾಪ್ಟನ್ ಹೀಗಾಗಿ ನಮ್ಮ ಜತೆ ಬಂದಿದ್ದಾರೆ ಎಂದರು.

Key words:   ramesh jarkiholi- about -Cabinet formation – BJP MLA’s -displeasure