ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣ: ಪೊಲೀಸ್ ವಿಚಾರಣೆ ಬಳಿಕ ದಿನೇಶ್ ಕಲ್ಲಹಳ್ಳಿ ಪ್ರತಿಕ್ರಿಯಿಸಿದ್ದು ಹೀಗೆ…

ಬೆಂಗಳೂರು,ಮಾರ್ಚ್,5,2021(www.justkannada.in):  ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಚಾರಣೆ ವೇಳೆ ತನಿಖೆಗೆ ಅಗತ್ಯವಿರುವ ಮಾಹಿತಿ ನೀಡಿದ್ದೇನೆ ಎಂದು ದೂರುದಾರ ದಿನೇಶ್ ಕಲ್ಲಹಳ್ಳಿ ತಿಳಿಸಿದ್ದಾರೆ.jk

ರಮೇಶ್ ಜಾರಕಿಹೊಳಿ ರಾಸಲೀಲೆ ವಿಡಿಯೋ  ಬಿಡುಗಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ದಿನೇಶ್ ಕಲ್ಲಹಳ್ಳಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದರು. ಸತತ 4 ಗಂಟೆ ವಿಚಾರಣೆ ಎದುರಿಸಿ ಠಾಣೆಯಿಂದ ಹೊರ ಬಂದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ದಿನೇಶ್ ಕಲ್ಲಹಳ್ಳಿ,  ನನ್ನ ಬಳಿ ಲಭ್ಯವಿರುವ ಮಾಹಿತಿಯನ್ನು ನೀಡಿದ್ದೇನೆ. ತನಿಖೆಗೆ ಬೇಕಾದ ಮಾಹಿತಿಯನ್ನು ನೀಡಿದ್ದೇನೆ. ಮುಚ್ಚಿದ ಲಕೋಟೆಯಲ್ಲಿ ಇದ್ದ ಸಿಡಿಯನ್ನು ನೀಡಿದ್ದೇನೆ. ತನಿಖೆ ನಡೆಯುತ್ತಿರುವ ಹಿನ್ನೆಲೆ ಯಾವುದೇ ವಿಚಾರ ಹಂಚಿಕೊಳ್ಳಲು  ಆಗಲ್ಲ ಎಂದರು.Ramesh jarakihili –Rasaleele- CD case-Dinesh Kallahalli – police-inquiry.

ಸಂತ್ರಸ್ತ ಯುವತಿ ನನ್ನ ಸಂಪರ್ಕದಲ್ಲಿ ಇಲ್ಲ. ಅವರ ಕುಟುಂಬಸ್ಥರು ಮಾತ್ರ ನನ್ನನ್ನ ಭೇಟಿಯಾಗಿದ್ದಾರೆ. ಸಿಡಿ ನೀಡಿದ್ದಾರೆ. ತನಿಖೆ ಬಳಿಕ ದೂರು ದಾಖಲಿಸುವುದಾಗಿ ಕುಟುಂಬಸ್ಥರು ಹೇಳಿದ್ದಾರೆ ಎಂದು ದಿನೇಶ್ ಕಲ್ಲಹಳ್ಳಿ ತಿಳಿಸಿದರು.

Key words: Ramesh jarakihili –Rasaleele- CD case-Dinesh Kallahalli – police-inquiry.