Thursday, August 13, 2026

BDA Apartments

Home Cinema ‘100’ ಬಿಡುಗಡೆ ಖುಷಿಯಲ್ಲಿ ನೂರು ಚಿತ್ರಗಳಿಗೆ ರಮೇಶ್ ಅರವಿಂದ್ ವಿಸಿಟ್!

‘100’ ಬಿಡುಗಡೆ ಖುಷಿಯಲ್ಲಿ ನೂರು ಚಿತ್ರಗಳಿಗೆ ರಮೇಶ್ ಅರವಿಂದ್ ವಿಸಿಟ್!

ಬೆಂಗಳೂರು, ನವೆಂಬರ್ 18, 2021 (www.justkannada.in): ಸೈಬರ್ ಕ್ರೈಂ ಆಧಾರಿತ ಕತೆಯಿರುವ 100 ಸಿನಿಮಾ ಇಂದಿನಿಂದ ಪ್ರದರ್ಶನಗೊಳ್ಳಲಿದ್ದು, ಈ ಸಂಭ್ರಮದಲ್ಲಿದ್ದಾರೆ ನಟ ರಮೇಶ್ ಅರವಿಂದ್.

ಬೆಂಗಳೂರಿನ ಪ್ರತೀ ಥಿಯೇಟರ್ ಗಳಿಗೂ ಚಿತ್ರತಂಡದೊಂದಿಗೆ ಭೇಟಿ ಕೊಟ್ಟು ಅಭಿಮಾನಿಗಳೊಂದಿಗೆ ಸಿನಿಮಾ ವೀಕ್ಷಿಸುವುದಾಗಿ ರಮೇಶ್ ಹೇಳಿದ್ದಾರೆ.

ಅಂದಹಾಗೆ 100 ಸಿನಿಮಾವನ್ನು ರಮೇಶ್ ನಿರ್ದೇಶಿಸಿರುವುದರ ಜೊತೆ ನಾಯಕರಾಗಿ ನಟಿಸಿದ್ದಾರೆ. ಅವರ ಜೊತೆಗೆ ರಚಿತಾ ರಾಂ, ಪೂರ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಕೊರೊನಾ ಲಾಕ್ ಡೌನ್ ಬಳಿಕ ಸಿನಿಮಾ ಬಿಡುಗಡೆಯಾಗುತ್ತಿರುವ ಖುಷಿಯಲ್ಲಿರುವ ನಟ ರಮೇಶ್ ಅರವಿಂದ್ ಇದರ ಪ್ರಚಾರಕ್ಕೆ ಥಿಯೇಟರ್ ಗಳಿಗೆ ಭೇಟಿ ಕೊಡಲಿದ್ದಾರೆ.