ರಾಮನಗರವನ್ನ ಕ್ಲೀನ್ ಮಾಡ್ತೀವಿ ಪೌರುಷ ತೋರಿಸ್ತೀವಿ ಅಂದವರು ಎಲ್ಲಿದ್ದಾರೆ-ಸಚಿವ ಅಶ್ವಥ್ ನಾರಾಯಣ್ ಗೆ ಡಿ.ಕೆ ಸುರೇಶ್ ಟಾಂಗ್.

0
3

ರಾಮನಗರ,ಆಗಸ್ಟ್,30,2022(www.justkannada.in):  ರಾಮನಗರದಲ್ಲಿ ಮಳೆಯಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ  ಜಿಲ್ಲಾ ಉಸ್ತುವಾರಿ ಸಚಿವ  ಅಶ್ವಥ್ ನಾರಾಯಣ್ ಗೆ ಟಾಂಗ್ ನೀಡಿರುವ ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್,   ನಗರವನ್ನು ಕ್ಲೀನ್ ಮಾಡ್ತೀವಿ, ಪೌರುಷ ತೋರಿಸ್ತೀವಿ ಅಂತ ಹೇಳಿದವರು ಎಲ್ಲಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಕೆಲ ತಿಂಗಳ ಹಿಂದೆ ರಾಮನಗರದಲ್ಲಿ ನಡೆದ ಸಮಾರಂಭವೊಂದರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲೇ ವೇದಿಕೆಯಲ್ಲೇ ಸಂಸದ ಡಿಕೆ ಸುರೇಶ್ ಮತ್ತು ಸಚಿವ ಡಾ ಸಿ.ಎನ್ ಅಶ್ವಥ್ ನಾರಾಯಣ್ ನಡುವೆ ವಾಗ್ವಾದ ನಡೆದಿತ್ತು.free rice - BPL card -holders - - Center- MP- DK Suresh

ಇದೀಗ  ಮಳೆಯಿಂದಾಗಿ ರಾಮನಗರ ಜಿಲ್ಲೆಯಲ್ಲಿ ಜನ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಸಮಸ್ಯೆ ಆಲಿಸಲು ಸಚಿವ ಅಶ್ವಥ್ ನಾರಾಯಣ್ ಮುಂದಾಗಿಲ್ಲ ಎಂದು ಆರೋಪಿಸಿ ಕಿಡಿಕಾರಿರುವ ಸಂಸದ ಡಿ.ಕೆ ಸುರೇಶ್, ಪಟ್ಟಣದಲ್ಲಿ ಮಳೆಯಿಂದಾಗಿ ಜನರು ಬೀದಿಗೆ ಬರುವಂತಾಗಿದ್ದರೂ ಗಂಡಸ್ತನ ತೋರಿಸುತ್ತೇನೆ ಅಂತ ಹೇಳಿದವರು ಪತ್ತೆಯಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

Key words: Ramanagara-rain-MP-DK Suresh -Tong – Minister- Aswath Narayan.