Friday, September 18, 2026

BDA Apartments

Home Front Page ಬಾಲಕಿ ಮೇಲೆ ಕುಸಿದು ಬಿದ್ದ ಮನೆ: ಪ್ರಾಣಾಪಾಯದಿಂದ ಪಾರು: 5 ಲಕ್ಷ ಪರಿಹಾರ ಘೋಷಣೆ…

ಬಾಲಕಿ ಮೇಲೆ ಕುಸಿದು ಬಿದ್ದ ಮನೆ: ಪ್ರಾಣಾಪಾಯದಿಂದ ಪಾರು: 5 ಲಕ್ಷ ಪರಿಹಾರ ಘೋಷಣೆ…

ನಂಜನಗೂಡು,ಆಗಸ್ಟ್30,2022(www.justkannada.in): ಬಾಲಕಿ ಮೇಲೆ ಮನೆ ಗೋಡೆ ಕುಸಿದು ಬಿದ್ದ ಘಟನೆ ನಂಜನಗೂಡು ತಾಲೂಕಿನ ಕಳಲೆ ಗ್ರಾಮದಲ್ಲಿ ನಡೆದಿದೆ.

ಬಾಲಕಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.ನಿರಂತರ ಮಳೆಯಿಂದಾಗಿ ಮನೆ ಕುಸಿದಿದೆ. ಪೂರ್ಣಿ(3)ಪ್ರಾಣಾಪಾಯದಿಂದ ಉಳಿದ ಬಾಲಕಿ. ನಂಜುಂಡನಾಯಕ ಎಂಬುವರಿಗೆ ಸೇರಿದ ಮನೆ ಕುಸಿದಿದೆ. ಮಾಹಿತಿ ಅರಿತ ನಂಜನಗೂಡು ತಹಸೀಲ್ದಾರ್ ಶಿವಮೂರ್ತಿ ಹಾಗೂ ರೆವಿನ್ಯೂ ಇನ್ಸ್ಪೆಕ್ಟರ್ ಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಬಾಲಕಿ ಮೇಲೆ ಕುಸಿದು ಬಿದ್ದ ಮನೆ nanjanagud

ರಕ್ಷಣೆಯಾದ ಬಾಲಕಿಯ ಆರೋಗ್ಯ ವಿಚಾರಿಸಿದ್ದಾರೆ. ಘಟನೆಯಿಂದ ಗಾಯಗೊಂಡು ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ಬಾಲಕಿಗೆ ಹೆಚ್ಚಿನ ಚಿಕಿತ್ಸೆಗಾಗಿ ತಹಸೀಲ್ದಾರ್ ಶಿವಮೂರ್ತಿ ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಾನಿಯಾದ ಮನೆ ಮರು ನಿರ್ಮಾಣಕ್ಕೆ ಸ್ಥಳದಲ್ಲೇ 5 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.

Key words: house -collapsed – girl-5 lakh-compensation-announced