ಯಾವುದೇ ಧರ್ಮ ದ್ವೇಷ ಮಾಡುವಂತೆ ಹೇಳಲ್ಲ: ನಾವೆಲ್ಲಾ ಒಟ್ಟಾಗಿ ಬಾಳಬೇಕು- ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಮಾರ್ಚ್,21,2026 (www.justkannada.in) ಯಾವುದೇ ಧರ್ಮ ದ್ವೇಷ ಮಾಡುವಂತೆ ಹೇಳಲ್ಲ. ಯಾವುದೇ ಧರ್ಮ ದ್ವೇಷ ಬೋಧನೆ ಮಾಡಬಾರದು ಎಂದು ಸಿಎಂ ಸಿದ್ದರಾಮಯ್ಯ ನುಡಿದರು.

ಇಂದು ಮುಸ್ಲೀಂ ಸಮುದಾಯಕ್ಕೆ ರಂಜಾನ್  ಸಂಭ್ರಮ ಹಿನ್ನೆಲೆಯಲ್ಲಿ ಮಿಲ್ಲರ್ ರಸ್ತೆಯ ಮಸ್ಕಿದ್ ಇ ಖಾದ್ರಿಯಾದಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾವು ಪ್ರಾರ್ಥನೆ ಮಾಡೋದು ದೇವರು ಹಾಗೂ ಮನುಕುಲಕ್ಕೆ.  ನಾವೆಲ್ಲಾ ಮಾನವರಾಗಿ ಕೆಲಸ ಮಾಡಬೇಕು.  ಇದು ಬಹಳ ಅವಶ್ಯಕ. ಬದುಕಿನ ಸಾರ್ಥಕಕ್ಕೆ ಮಾನವೀಯತೆ ವಿಶ್ವಾಸದಿಂದ ಇರಬೇಕು ಎಂದರು.

ನಮ್ಮ ದೇಶ ಅನೇಕ ಜಾತಿ ಧರ್ಮದಿಂದ ಕೂಡಿದೆ. ಯಾವುದೇ ಜಾತಿ ಧರ್ಮ ಇದ್ದರೂ ನಾವೆಲ್ಲಾ ಒಟ್ಟಾಗಿ ಬಾಳಬೇಕು. ಯಾವುದೇ ಧರ್ಮ ದ್ವೇಷ ಬೋಧನೆ ಮಾಡಬಾರದು ಇಸ್ಲಾಂ, ಕ್ರೈಸ್ತ, ಹಿಂದೂ ಧರ್ಮಗಳು ಪ್ರೀತಿಯನ್ನೇ ತೋರಿಸಿವೆ .ಯಾವುದೇ ಧರ್ಮ ದ್ವೇಷ ಮಾಡುವಂತೆ ಹೇಳಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Key words: Ramadan, prayer, religion, CM Siddaramaiah