Sunday, September 13, 2026

BDA Apartments

ಜವಾಬ್ದಾರಿಯುತ ವ್ಯಕ್ತಿ ಮಾತಾಡುವ ಮಾತಲ್ಲ- ದೇಣಿಗೆ ಸಂಗ್ರಹ ವಿಚಾರ ಕುರಿತು ಶ...
Home Front Page ಜವಾಬ್ದಾರಿಯುತ ವ್ಯಕ್ತಿ ಮಾತಾಡುವ ಮಾತಲ್ಲ- ದೇಣಿಗೆ ಸಂಗ್ರಹ ವಿಚಾರ ಕುರಿತು ಶಾಸಕ.ಎಸ್.ಎ ರಾಮದಾಸ್ ಟಾಂಗ್…

ಜವಾಬ್ದಾರಿಯುತ ವ್ಯಕ್ತಿ ಮಾತಾಡುವ ಮಾತಲ್ಲ- ದೇಣಿಗೆ ಸಂಗ್ರಹ ವಿಚಾರ ಕುರಿತು ಶಾಸಕ.ಎಸ್.ಎ ರಾಮದಾಸ್ ಟಾಂಗ್…

ಮೈಸೂರು,ಫೆಬ್ರವರಿ,19,2021(www.justkannada.in):   ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ವಿಚಾರಕ್ಕೆ ಸಂಬಂಧಿಸಿದಂತೆ ಪುಂಡು ಪೋಕರಿಗಳು ಹಣ ಸಂಗ್ರಹವಾಗುತ್ತಿದೆ ಎಂಬ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆಗೆ ಬಿಜೆಪಿ ಶಾಸಕ ಎಸ್.ಎ ರಾಮದಾಸ್ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಈ ವಿಚಾರ ಕುರಿತು ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ಶಾಸಕ ಎಸ್.ಎ ರಾಮದಾಸ್,  ಅದೆಲ್ಲ ಬರಿ ಸುಳ್ಳು ಮಾಹಿತಿಗಳು. ಜವಾಬ್ದಾರಿಯುತ್ತ ವ್ಯಕ್ತಿ ಮಾತಾಡುವ ಮಾತಲ್ಲ. ಯಾರ ಬಳಿ ಹಣ ಪಡೆದರೂ ರಶೀದಿ ನೀಡಲಾಗುತ್ತಿದೆ. ಅಥವಾ ಚೆಕ್ ಮುಖಾಂತರ , ಆನ್ ಲೈನ್ ಮುಖಾಂತರ ಹಣ ಕೊಡಿ ಅಂತ ಹೇಳ್ತಿದೀವಿ. ಹಾಗಿರುವಾಗ ಸಣ್ಣ ಸಣ್ಣ ಮಾತುಗಳು ದೊಡ್ಡ ವ್ಯಕ್ತಿಗಳಿಂದ ಬರೋದು ಸೂಕ್ತ ಅಲ್ಲ ಎಂದು ಟಾಂಗ್ ನೀಡಿದರು.

ರಾಮಮಂದಿರ ವಿಷಯದಲ್ಲಿ ರಾಜಕೀಯ ಅಗಬಾರದು. ರಾಮಮಂದಿರ ಕೇವಲ ಹಿಂದೂಗಳಿಗೆ ಸೇರಿದ್ದಲ್ಲ. ಭಾರತದಲ್ಲಿ ವಾಸಮಾಡುವ ಎಲ್ಲ ಭಾರತೀಯಾರಿಗೂ ಸಲ್ಲುತೆ. ಹಾಗಾಗಿ ಅದರಲ್ಲಿ ಹಿಂದೂ ಮುಸಲ್ಮಾನ ಅಂತ ಏನೂ ಇಲ್ಲ, ಮೌಲ್ವಿಗಳು ಹಣ ನೀಡುತ್ತಿದ್ದಾರೆ. ಕೆಲವರಿಗೆ ಎಲ್ಲೋ ಒಂದು ಕಡೆ ಹಿಂದೂಗಳು ಅದರ ಆತ್ಮಾವಲೋಕನ ಮಾಡಿಕೊಳ್ಳಬೇಕು. ನಾನು ಈ ಭೂಮಿಯಲ್ಲಿ ಹುಟ್ಟಿದೀನಿ ನನಗೂ ಒಂದು ಸಂಸ್ಕಾರ ಇದೆ. ಅದನ್ನ ಬಿಟ್ಟು ದೇಶವನ್ನ ಸಮಾಜವನ್ನ ಹೊಡೆಯುವಂತಹ ಕೆಲಸ ಆಗಬಾರದು ಎಂದು ಶಾಸಕ ಎಸ್.ಎ ರಾಮದಾಸ್ ಸಲಹೆ ನೀಡಿದರು.rama mandir-construction- responsible -person - not –MLA- S.A Ramdas -Tong

ಮೈಸೂರಿನಲೇ ಬಹಳಷ್ಟು ನಾಯಕರ ಮನೆಗಳಿವೆ. ದುಡ್ಡು ಕೊಟ್ಟಿಲ್ಲ ಅಂತ ಅವರ ಮನೆ ಬಾಗಿಲಿಗೆ ಏನು ಅಂಟಿಸಿಲ್ಲ. ರಾಜಕೀಯ ಗೋಸ್ಕರ ಮಾತನಾಡಬಾರದು ಎಂದು ಶಾಸಕ ಎಸ್.ಎ ರಾಮದಾಸ್ ತಿಳಿಸಿದರು.

Key words: rama mandir-construction- responsible -person – not –MLA- S.A Ramdas -Tong