ಅಯೋಧ್ಯೆ,ಮಾರ್ಚ್,27,2026 (www.justkannada.in): ಇಂದು ನಾಡಿನಾದ್ಯಂತ ರಾಮನವಮಿ ಸಂಭ್ರಮವಾಗಿದ್ದು, ಉತ್ತರ ಪ್ರದೇಶದ ಅಯೊಧ್ಯೆಯಲ್ಲಿ ಸಂಭ್ರಮ ಮನೆ ಮಾಡಿದೆ.
ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಶ್ರೀರಾಮನಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ರಾಮಲಲ್ಲಾನ ಹಣೆಗೆ 4 ನಿಮಿಷಗಳ ಕಾಲ ಸೂರ್ಯರಶ್ಮಿ ತಿಲಕವಿಟ್ಟಿದೆ.
ರಾಮನವಮಿಯಂದು ಬಾಲರಾಮನ ದರ್ಶನಕ್ಕೆ ಭಕ್ತಸಾಗರವೇ ಹರಿದು ಬಂದಿದ್ದು, ಶ್ರೀರಾಮನ ದರ್ಶನ ಪಡೆದು ಭಕ್ತರು ಪುನೀತರಾಗಿದ್ದಾರೆ, ಸರತಿಸಾಲಿನಲ್ಲಿ ಬಂದು ಶ್ರೀರಾಮನ ದರ್ಶನ ಪಡೆಯುತ್ತಿದ್ದಾರೆ.
Key words: Ram Navami, celebrations, Ayodhya







