Friday, August 14, 2026

BDA Apartments

Home Front Page ಒಳ ಮೀಸಲಾತಿ: ನೀತಿ ಸಂಹಿತೆ ಮುಗಿದ ತಕ್ಷಣ ನಿರ್ಧಾರ ಮಾಡ್ತೇವೆ- ಸಚಿವ ಕೆ.ಎಚ್ ಮುನಿಯಪ್ಪ

ಒಳ ಮೀಸಲಾತಿ: ನೀತಿ ಸಂಹಿತೆ ಮುಗಿದ ತಕ್ಷಣ ನಿರ್ಧಾರ ಮಾಡ್ತೇವೆ- ಸಚಿವ ಕೆ.ಎಚ್ ಮುನಿಯಪ್ಪ

ಬೆಂಗಳೂರು,ಮಾರ್ಚ್,27,2026 (www.justkannada.in): ಒಳ ಮೀಸಲಾತಿ ಬಗ್ಗೆ ಅಂತಿಮ ನಿಲುವು ತೆಗೆದುಕೊಂಡು ನೇಮಕಾತಿಗಳನ್ನ ಅರಂಭಿಸುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲು ಇಂದು ಕರೆಯಲಾಗಿದ್ದ ವಿಶೇಷ ಸಚಿವ ಸಂಪುಟ ಸಭೆಯನ್ನ ಉಪಚುನಾವಣೆ ಕಾರಣದಿಂದ ಸರ್ಕಾರ ಮುಂದೂಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಆಹಾರ ಸಚಿವ ಕೆ.ಎಚ್ ಮುನಿಯಪ್ಪ, ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪಚುನಾವಣೆ ನೀತಿ ಸಂಹಿತೆ ಮುಗಿದ ತಕ್ಷಣ ನಿರ್ಧಾರ ಮಾಡುತ್ತೇವೆ ಎಂದಿದ್ದಾರೆ.

ಒಳಮೀಸಲಾತಿ ಜಾರಿ ವಿಚಾರದಲ್ಲಿ ಸರ್ಕಾರ ಬದ್ದವಾಗಿದೆ.  ಹೋರಟ ಸಮಿತಿಗಳು ವಿನಾಕಾರಣ ಗೊಂದಲ ಮಾಡಬಾರದು. 56 ಸಾವಿರ ಹುದ್ದೆಗಳ ನೇಮಕಾತಿ ಬಗ್ಗೆ ಸ್ವಲ್ಪ ಗೊಂದಲವಿತ್ತು.  ಎಂಪರಿಕೆಲ್ ಡೆಟಾವನ್ನ ಸರ್ಕಾರ ಒಪ್ಪಿಕೊಂಡಿದೆ.  ನೀತಿ ಸಂಹಿತೆ  ಮುಗಿದ ತಕ್ಷಣ ನಿರ್ಧಾರ ಮಾಡುತ್ತೇವೆ ಎಂದರು.

Key words: Internal reservation, Minister, K.H. Muniyappa