‘777 ಚಾರ್ಲಿ’ ಕುರಿತ ಮತ್ತೊಂದು ಸುದ್ದಿ ಹಂಚಿಕೊಂಡ ರಕ್ಷಿತ್ ಶೆಟ್ಟಿ

0
2

ಬೆಂಗಳೂರು. ಮೇ 10, 2022 (www.justkannada.in): ರಕ್ಷಿತ್‌ ಶೆಟ್ಟಿ ಅಭಿನಯದ ‘777 ಚಾರ್ಲಿ’ ಟ್ರೇಲರ್‌ ಮೇ 16ರಂದು ಮಧ್ಯಾಹ್ನ 12.12ಕ್ಕೆ ಬಿಡುಗಡೆಯಾಗಲಿದೆ.

ವಿಶ್ವದಾದ್ಯಂತ ಜೂನ್‌ 10ರಂದು ರಿಲೀಸ್‌ ಆಗಲಿದೆ. ಸಿನಿಮಾದ ಟ್ರೇಲರ್‌ ಪೋಸ್ಟರ್‌ ಅನ್ನು ರಕ್ಷಿತ್‌ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಅಂದಹಾಗೆ ಚಿತ್ರದ ಹಿಂದಿ ಅವತರಣಿಕೆಯನ್ನು ಯುಎಫ್‌ಒ ಸಂಸ್ಥೆ ವಿತರಣೆ ಮಾಡಲಿದ್ದು, ಈ ಪ್ಯಾನ್‌ ಇಂಡಿಯಾ ಸಿನಿಮಾ ಮೇಲೆ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿದೆ.

ಚಿತ್ರದ ಕನ್ನಡ ಆವೃತ್ತಿಯ ಡಿಜಿಟಲ್‌ ಹಾಗೂ ಸ್ಯಾಟಲೈಟ್‌ ಪ್ರಸಾರದ ಹಕ್ಕನ್ನು ಕಲರ್ಸ್‌ ಕನ್ನಡ ಹಾಗೂ ವೂಟ್‌ ಪಡೆದುಕೊಂಡಿದೆ.

‘777 ಚಾರ್ಲಿ’ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ತೆರೆಕಾಣಲಿದೆ.