ಡಿಸೆಂಬರ್’ನಿಂದ ರಕ್ಷಿತ್ ಶೆಟ್ಟಿಯ ‘ರಿಚರ್ಡ್ ಆ್ಯಂಟೊನಿ’ ಶೂಟಿಂಗ್

ಬೆಂಗಳೂರು, ಜೂನ್ 28, 2022 (www.justkannada.in): ನಟ ರಕ್ಷಿತ್ ಶೆಟ್ಟಿ ಅವರ ಬಹು ನಿರೀಕ್ಷಿತ ಸಿನಿಮಾ ‘ರಿಚರ್ಡ್ ಆ್ಯಂಟೊನಿ’ ಸಿನಿಮಾ ಕುರಿತ ಹೊಸ ಸುದ್ದಿ ಹೊರಬಿದ್ದಿದೆ.

777 ಚಾರ್ಲಿ ಸಿನಿಮಾ ಯಶಸ್ಸಿನ ಖುಷಿಯಲ್ಲಿರುವ ರಕ್ಷಿತ್ ಅವರ ಮುಂದಿನ ಸಿನಿಮಾ ಯಾವಾಗ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದರು. ಈ ಕುರಿತ ಅಪ್ಡೇಟ್ ಈಗ ಸಿಕ್ಕಿದೆ.

ಉಳಿದವರು ಕಂಡಂತೆ ಮುಂದುವರೆದ ಭಾಗ ಎನ್ನಲಾಗುತ್ತಿರುವ ‘ರಿಚರ್ಡ್ ಆ್ಯಂಟೊನಿ’ ಚಿತ್ರದ ಶೂಟಿಂಗ್ ಡಿಸೆಂಬರ್ ನಲ್ಲಿ ಆರಂಭವಾಗಲಿದೆ ಎನ್ನಲಾಗುತ್ತಿದೆ.

ಸದ್ಯ ರಕ್ಷಿತ್ ಶೆಟ್ಟಿ ಹೇಮಂತ್ ರಾವ್ ನಿರ್ದೇಶನದ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರ ಶೂಟಿಂಗ್ ಮುಗಿದ ನಂತರ ಅವರು ‘ರಿಚರ್ಡ್ ಆ್ಯಂಟೊನಿ’ ಸಿನಿಮಾವನ್ನು ಆರಂಭಿಸಲಿದ್ದಾರೆ.

ಈ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್​ ನಿರ್ಮಾಣ ಮಾಡುತ್ತಿದ್ದು, ಟೈಟಲ್​ ಅನ್ನು ವಿಡಿಯೋ ಮೂಲಕ ರಿವೀಲ್ ಮಾಡಲಾಗಿತ್ತು.