Friday, October 2, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Cinema ವಿವಾಹವನ್ನು ಖಚಿತ ಪಡಿಸಿದ ರಾಖಿ ಸಾವಂತ್: ಎನ್ ಆರ್ ಐ ಉದ್ಯಮಿ ಪತಿಯ ಬಗ್ಗೆ ಹೇಳಿದ್ದೇನು...

ವಿವಾಹವನ್ನು ಖಚಿತ ಪಡಿಸಿದ ರಾಖಿ ಸಾವಂತ್: ಎನ್ ಆರ್ ಐ ಉದ್ಯಮಿ ಪತಿಯ ಬಗ್ಗೆ ಹೇಳಿದ್ದೇನು ಗೊತ್ತೇ

ಮುಂಬೈ:ಆ-5:(www.justkannada.in) ಬಾಲಿವುಡ್ ನಟಿ ರಾಖಿ ಸಾವಂತ್ ಕೊನೆಗೂ ತಾವು ವಿವಾಹವಾಗಿದ್ದಾಗಿ, ಹಾಕೂ ತಮ್ಮ ಪತಿ ಯುಕೆ ಮೂಲದ ಉದ್ಯಮಿ ರಿತೇಶ್ ಎಂಬುದಾಗಿ ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ.

ಬಾಲಿವುಡ್ ಡ್ರಾಮಾ ಕ್ವೀನ್ ಎಂದೇ ಖ್ಯಾತಿಯಾಗಿರುವ ನಟಿ ರಾಖಿ ಸಾವಂತ್, ಇತ್ತೀಚೆಗೆ ಮುಂಬೈ ಹೋಟೆಲ್ ರೂಂ ನಲ್ಲಿ ಎನ್‍ಆರ್‍ಐ ಉದ್ಯಮಿಯನ್ನು ಗೌಪ್ಯವಾಗಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಪ್ರಸಾರವಾಗಿತ್ತು. ಆದರೆ ಈ ಬಗ್ಗೆ ರಾಖಿಯನ್ನು ಕೇಳಿದರೆ ಇದೊಂದು ಸುಳ್ಳು ಸುದ್ದಿ. ತಾನು ಕೇವಲ ಫೋಟೋ ಶೂಟ್ ಗಾಗಿ ಬ್ರೈಡಲ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾಗಿ ಹೇಳಿದ್ದರು.

ಆದರೀಗ ಅವರೇ ಸ್ವತ: ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹನಿಮೂನ್ ಫೋಟೋ ಹಂಚಿಕೊಳ್ಳುವ ಮೂಲಕ ಮದುವೆ ಆಗಿದ್ದೇನೆ ಎಂದು ಖಚಿತಪಡಿಸಿದ್ದಾರೆ. ಅಲ್ಲದೇ ಯುನೈಟೆಡ್​ ಕಿಂಗ್​ಡಮ್​ ಮೂಲದ ತನ್ನ ಅಭಿಮಾನಿಯಾಗಿರುವ 36 ವರ್ಷದ ಉದ್ಯಮಿ ರಿತೇಶ್​ ಎಂಬುವವರನ್ನು ತಾನು ವರಿಸಿರುವುದಾಗಿಯೂ ತಿಳಿಸಿದ್ದಾರೆ.

ಇನ್ನು ಸಂದರ್ಶನವೊಂದರಲ್ಲಿ ಕೂಡ ಮಾತನಾಡಿದ ರಾಖಿ, ಹೌದು ನಾನು ಮದುವೆಯಾಗಿದ್ದೇನೆ. ನಾನು ಈ ಸುದ್ದಿಯನ್ನು ಈಗ ಅಧಿಕೃತವಾಗಿ ಹೇಳುತ್ತಿದ್ದೇನೆ. ನನ್ನ ಪತಿಯ ಹೆಸರು ರಿತೇಶ್. ಅವರೊಬ್ಬ ಉದ್ಯಮಿಯಾಗಿದ್ದು, ಯುಕೆಯಲ್ಲಿ ವಾಸವಾಗಿದ್ದಾರೆ. ನನ್ನ ವೀಸಾದ ಕೆಲಸ ನಡೆಯುತ್ತಿದೆ. ವೀಸಾ ಕೆಲಸ ಮುಗಿದ ನಂತರ ನಾನು ಅವರೊಂದಿಗೆ ಸೇರುತ್ತೇನೆ ಎಂದಿದ್ದಾರೆ.

ಪ್ರಭು ಚಾವ್ಲಾ ಅವರ ಜೊತೆ ನನ್ನ ಮೊದಲ ಸಂದರ್ಶನ ನೋಡಿ ರಿತೇಶ್ ನನ್ನ ಅಭಿಮಾನಿ ಆಗಿದ್ದರು. ಬಳಿಕ ಅವರು ನನಗೆ ವಾಟ್ಸಾಪ್ ಮೂಲಕ ಮೆಸೇಜ್ ಮಾಡುತ್ತಿದ್ದರು. ಹೀಗೆ ನಮ್ಮಿಬ್ಬರ ಸ್ನೇಹ ಶುರುವಾಯಿತು. ಸ್ನೇಹ ಪ್ರೀತಿಗೆ ತಿರುಗಿತ್ತು ಎಂದಿದ್ದಾರೆ. ಒಂದು ದಿನ ನನ್ನ ಭಾವನೆ ಕದಡಿತು. ಆಗ ರಿತೇಶ್​ ಸಂದೇಶವೊಂದನ್ನು ಕಳುಹಿಸಿ ನೀವೇಕೆ ಡಲ್​ ಆಗಿದ್ದೀರಾ ಎಂದು ಕೇಳಿದ. ಒಂದು ಬಾರಿ ನಾನು ಆಶ್ಚರ್ಯಕ್ಕೆ ಒಳಗಾದೆ. ನಾನು ಡಲ್​ ಆಗಿದ್ದೇನೆಂದು ನಿನಗೆ ಹೇಗೆ ತಿಳಿಯಿತು ಎಂದು ಪ್ರಶ್ನಿಸಿದೆ. ಅದಕ್ಕೆ ಉತ್ತರಿಸಿದ ರಿತೇಶ್​, ನಾನು ಬಹುಕಾಲದಿಂದ ನಿಮ್ಮ ಅಭಿಮಾನಿಯಾಗಿದ್ದೇನೆ. ಇಷ್ಟು ಸಾಕು ನಿಮ್ಮ ಭಾವನೆಯನ್ನು ಅರ್ಥಮಾಡಿಕೊಳ್ಳಲು ಎಂದು ಹೇಳಿದ. ಆಗಲೇ ನಾನು ಅವನ ಪ್ರೀತಿಯಲ್ಲಿ ಬಿದ್ದೆ ಎಂತಲೂ ಹೇಳಿದ್ದಾರೆ.

ರಿತೇಶ್​ ಒಬ್ಬ ಗೌರವಯುತ ಉದ್ಯಮಿಯಾಗಿದ್ದು, ಮಾಧ್ಯಮದಲ್ಲಿ ಅವರನ್ನು ನೋಡಲು ನಾನು ಬಯಸುವುದಿಲ್ಲ.​ ಮಗು ಆಗುವವರೆಗೂ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ರಿತೇಶ್​ ನನಗೆ ಭರವಸೆ ನೀಡಿದ್ದು, ಮಗುವಾದ ಬಳಿಕ ಫೋಟೊಶೂಟ್​ ಮಾಡಿಸುತ್ತೇವೆ. ಅಂದು ರಿತೇಶ್​ ಮಾಧ್ಯಮಗಳಲ್ಲಿ ಕಾಣಿಸಲಿದ್ದಾರೆ ಎಂದಿದ್ದಾರೆ.

ಈ ಮದುವೆ ವಿಚಾರ ಕೂಡ ಎಂದಿನಂತೆ ಪ್ರಚಾರಕ್ಕಾಗಿ ನೀವಾಡುವ ಸುಳ್ಳುಗಳೇ ಎಂಬ ಪ್ರಶ್ನೆಗೆ ಉತ್ತರಿಸಿರುವ ರಾಖಿ, ಇಲ್ಲ. ಇದು ನಿಜವಾದ ಮದುವೆ. ಹಿಂದೆ ದೀಪಕ್​ ಕಲಾಲ್​ ಜತೆ ತಮಾಷೆಗೆ ಮಾಡಿದ್ದು, ದೀಪಕ್ ಕಲಾಲ್ ನನ್ನ ಸಹೋದರ ಸಮಾನವಷ್ಟೇ. ನಾವು ತಮಾಷೆ ಮಾಡುತ್ತಿದ್ದೆವು ಅಷ್ಟೇ, ಆದರೆ, ಅದೇ ತಮಾಷೆ ಒಂದು ದಿನ ರಿತೇಶ್​ ಜತೆ ನನ್ನ ಮದುವೆ ಮಾಡಿಸುತ್ತದೆ ಎಂದು ನಾನು ತಿಳಿದಿರಲಿಲ್ಲ. ರಿತೇಶ್​ ನನಗೆ ಪ್ರಪೋಸ್​ ಮಾಡಲಿಲ್ಲ. ಆದರೆ, ಅಭದ್ರತೆ ಕಾಡಿ ನನ್ನನ್ನು ನೀವು ಮದುವೆಯಾಗುತ್ತೀರಾ ಎಂದು ಕೇಳಿದ ಎಂದು ಹೇಳಿದ್ದಾರೆ.

ಇನ್ನು ನಟಿಯರು ಮದುವೆಯಾಗಿದ್ದಾರೆ ಎಂದು ಗೊತ್ತಾದರೆ ಅವರಿಗೆ ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆಯಾಗುವುದನ್ನು ನಾನು ಈ ಹಿಂದೆ ನೋಡಿದ್ದೇನೆ. ಈ ಒಂದು ಚಿಂತೆಯಿಂದ ನಾನು ಇಲ್ಲಿಯವರೆಗೆ ವಿಷಯ ಬಹಿರಂಗಪಡಿಸಲಿಲ್ಲ ಎಂದಿರುವ ರಾಖಿ, ಏನೇ ಆಗಲಿ ನಾನಿಂದು ತುಂಬಾ ಸಂತೋಷವಾಗಿದ್ದೇನೆ. ನನ್ನ ಕನಸಿನ ವ್ಯಕ್ತಿಯನ್ನು ನಾನು ಮದುವೆಯಾಗಿದ್ದೇನೆ ಎಂದು ತಿಳಿಸಿದ್ದಾರೆ.

ವಿವಾಹವನ್ನು ಖಚಿತ ಪಡಿಸಿದ ರಾಖಿ ಸಾವಂತ್: ಎನ್ ಆರ್ ಐ ಉದ್ಯಮಿ ಪತಿಯ ಬಗ್ಗೆ ಹೇಳಿದ್ದೇನು ಗೊತ್ತೇ

Rakhi Sawant confirms marrying NRI after honeymoon pictures go viral, reveals husband’s name