ರಾಜ್ಯೋತ್ಸವ ಸಂಭ್ರಮ ವಾಹನ ಸಂಚಾರಕ್ಕೆ ಅಡ್ಡಿ : ಪೊಲೀಸರಿಂದ ಲಾಠಿ ಪ್ರಹಾರ 

ಬೆಳಗಾವಿ,ನವೆಂಬರ್,01,2020(www.justkannada.in) : ಜಿಲ್ಲೆಯಲ್ಲಿ  ಕನ್ನಡ ರಾಜ್ಯೋತ್ಸವ ಅಂಗವಾಗಿ ಗುಂಪು ಗುಂಪಾಗಿ ಸೇರಿ ಸಂಭ್ರಮಾಚರಣೆ ಮಾಡುತ್ತಿದ್ದವರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಲಾಗಿದೆ.

jk-logo-justkannada-logo

ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ಈ ಘಟನೆ ನಡೆದಿದೆ. ಕೋವಿಡ್ ಕಾರಣದಿಂದಾಗಿ ಈ ಬಾರಿ ಮೆರವಣಿಗೆಗೆ ಅವಕಾಶ ನೀಡಿರಲಿಲ್ಲ. ಆದರೂ ಚನ್ನಮ್ಮ ವೃತ್ತದಲ್ಲಿ ನೂರಾರು ಮಂದಿ ಸೇರಿದ್ದರು. ಅಲ್ಲಲ್ಲಿ ಗುಂಪು ಗುಂಪಾಗಿ ನಿಂತಿದ್ದರು. ಇದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯಾದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಬೀಸಿದರು ಎಂದು ತಿಳಿದು ಬಂದಿದೆ.

ಹೋಟೆಲ್‌ವೊಂದರ ಬಳಿ ನಿಂತಿದ್ದವರ ಮೇಲೂ ಪೊಲೀಸರು ಲಾಠಿ ಪ್ರಯೋಗಿಸಿದರು. ಈ ವೇಳೆ ತಪ್ಪಿಸಿಕೊಳ್ಳಲು ಓಡಿದ ಕೆಲವರು ಆಯತಪ್ಪಿ ಬಿದ್ದ ಘಟನೆಯೂ ನಡೆಯಿತು. ಪೊಲೀಸರು ದೂರದವರೆಗೂ ಓಡಿಸಿಕೊಂಡು ಹೋಗಿ ಗುಂಪು ಚದುರಿಸುವ ಕಾರ್ಯಮಾಡಿದ್ದಾರೆ.

ಕೆಲ ಕಿಡಿಗೇಡಿಗಳು ಮಹಾರಾಷ್ಟ್ರ ಸಾರಿಗೆ ಬಸ್ಸಿಗೆ ಕಲ್ಲು ತೂರಿದ್ದರಿಂದ ಪೊಲೀಸರು ಲಾಠಿ ಪ್ರಹಾರ ನಡೆಸಿದರು ಎನ್ನಲಾಗುತ್ತಿದೆ. ಆದರೆ, ಅದನ್ನು ಪೊಲೀಸರು ನಿರಾಕರಿಸಿದ್ದಾರೆ. ಕೋವಿಡ್ ಮಾರ್ಗಸೂಚಿ ಪಾಲನೆಯಾಗದ ಕಾರಣ ಗುಂಪು ಚದುರಿಸಲಾಯಿತು ಎಂದು ತಿಳಿಸಲಾಗಿದೆ.Rajyotsavam-celebration-disrupts-vehicle-traffic

ಚುನಾವಣಾ ಪ್ರಚಾರಕ್ಕೆ ಅನುಮತಿ ಕೊಡಲಾಗುತ್ತದೆ. ಅಲ್ಲಿ ಕೋವಿಡ್ ಅನ್ವಯವಾಗುವುದಿಲ್ಲವೇ?

ಪೊಲೀಸರ ಕ್ರಮ ಖಂಡಿಸಿ ಯುವಕರು ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಚುನಾವಣಾ ಪ್ರಚಾರಕ್ಕೆ ಅನುಮತಿ ಕೊಡಲಾಗುತ್ತದೆ. ಅಲ್ಲಿ ಕೋವಿಡ್ ಅನ್ವಯವಾಗುವುದಿಲ್ಲವೇ? ರಾಜ್ಯೋತ್ಸವ ಮೆರವಣಿಗೆ ಅವಕಾಶ ಕೊಡುವುದಿಲ್ಲವೇಕೆ? ಎಂದು ಆಕ್ರೋಶ ವ್ಯಕ್ತಪಡಿಸಿರುವುದಾಗಿ ತಿಳಿದು ಬಂದಿದೆ.

key words : Rajyotsavam-celebration-disrupts-vehicle-traffic