ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ: ಪಿಕ್ಚರ್ ಇನ್ನೂ ಇದೆ-  ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಗುಜರಾತ್, ಮೇ,16,2025 (www.justkannada.in):  ಅಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ ಪಾಕಿಸ್ತಾನ ಟ್ರೈಲರ್ ಮಾತ್ರ ನೋಡಿದೆ.  ಪಿಕ್ಚರ್ ಇನ್ನೂ ಇದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್  ಎಚ್ಚರಿಕೆ ನೀಡಿದರು.

ಗುಜರಾತ್ ನ ಭುಜ್ ವಾಯುನೆಲೆಗೆ ಭೇಟಿ ನೀಡಿ ಯೋಧರ ಪರಾಕ್ರಮವನ್ನ ಶ್ಲಾಘಿಸಿ ಅಭಿನಂದಿಸಿದ ಬಳಿಕ ಮಾತನಾಡಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಅಪರೇಷನ್ ಸಿಂಧೂರ ಯಶಸ್ವಿಯಾಗಿದೆ. ಕಾರ್ಯಾಚರಣೆಯಲ್ಲಿ ಭಾಗಿಯಾದ ಯೋಧರಿಗೆ ಅಭಿನಂದನೆಗಳು.  ಉಗ್ರರ ನೆಲೆಗಳನ್ನ ಧ್ವಂಸ ಮಾಡಿ ಪಾಕ್ ಗೆ ತಕ್ಕ ಉತ್ತರ ನೀಡಿದ್ದಾರೆ.  ಅಪರೇಷನ್ ಸಿಂಧೂರ ಹೆಸರು ಇಟ್ಟಿದ್ದು ಪ್ರಧಾನಿ ಮೋದಿ. ಯೋಧರು ಅಪರೇಷನ್ ಸಿಂಧೂರ ಯಶಸ್ವಿಗೊಳಿಸಿದ್ದಾರೆ. ನವ ಭಾರತಕ್ಕೆ ನುಗ್ಗಿ ಹೊಡೆಯೋದು ಗೊತ್ತು. ಕುತಂತ್ರಿ ಪಾಕ್ ಗೆ ತಕ್ಕ ಶಾಸ್ತಿಯಾಗಿದೆ ಎಂದರು.

ಐಎಂಎಫ್  ಪಾಕ್ ಗೆ ಸಾಲ ನೀಡಲು ನಿರ್ಧರಿಸಿದೆ. ಆದರೆ ಪಾಕ್ ಉಗ್ರ ಮಸೂದ್ ಗೆ 14 ಕೋಟಿ ಪರಿಹಾರ ನೀಡಿದೆ.  ಹಣ ನೀಡುವ ಮುನ್ನ ಪರಿಶೀಲಿಸಬೇಕು ಎಂದು ರಾಜನಾಥ್ ಸಿಂಗ್ ಮನವಿ ಮಾಡಿದರು.

ಪಾಕ್ ಗೆ ಭಾರತೀಯ ಸೇನೆ ಬುದ್ದಿ ಕಲಿಸಿದೆ.  ಶತ್ರುಗಳ ಒಳಕ್ಕೆ  ಹೋಗಿ ಹೊಡೆದಿದ್ದೇವೆ. ಪರಮಾಣು ಬಾಂಬ್ ಹಾಕುವುದಾಗಿ ಪಾಕಿಸ್ತಾನ ಬೆದರಿಕೆ ಹಾಕಿದೆ. ಇದು  ಇಡೀ ವಿಶ್ವಕ್ಕೆ ಬೆದರಿಕೆಯೊಡ್ಡಿದಂತಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.

Key words:  Operation Sindoora, Bhuj Air Base, Union Defence Minister, Rajnath Singh