ಬೂಟಾಟಿಕೆಗೆ 4 ಫ್ಲೈಟ್ ಕಳಿಸಿದ್ದು ಬಿಟ್ರೆ ಏನೂ ಮಾಡಿಲ್ಲ: ಅಪರೇಷನ್ ಸಿಂಧೂರ ಬಗ್ಗೆ ‘ಕೈ’ ಶಾಸಕ ಟೀಕೆ

ಕೋಲಾರ,ಮೇ,16,2025 (www.justkannada.in):  ಕೇಂದ್ರ ಸರ್ಕಾರ ಬೂಟಾಟಿಕೆಗೆ ನಾಲ್ಕು ಫ್ಲೈಟ್ ಮೇಲೆ ಕಳಿಸಿದ್ದು ಬಿಟ್ರೆ ಏನೂ ಮಾಡಿಲ್ಲ. ನೂರು ಜನರನ್ನ ಹೊಡೆದಿದ್ದು ಕನ್ಫರ್ಮ್ ಆಗಿಲ್ಲ ಎಂದು ಹೇಳುವ ಮೂಲಕ ಅಪರೇಷನ್ ಸಿಂಧೂರ ಕಾರ್ಯಾಚರಣೆಯ ಬಗ್ಗೆ ಕಾಂಗ್ರೆಸ್‌ ಶಾಸಕ ಕೊತ್ತೂರು ಮಂಜುನಾಥ್‌ ಟೀಕಿಸಿದ್ದಾರೆ.

ಈ ಕುರಿತು ಮಾತನಾಡಿರುವ ಶಾಸಕ ಕೊತ್ತೂರು ಮಂಜುನಾಥ್,  26 ಜನ ಮಹಿಳೆಯರ ಅರಿಶಿನ ಕುಂಕುಮಕ್ಕೆ ಬೆಲೆ ಇಷ್ಟೆನಾ? ಆ ಹೆಣ್ಣು ಮಕ್ಕಳಿಗೆ ಸಿಕ್ಕ ಪರಿಹಾರ ಇದೇನಾ? ಅಂತ ಬೇಸರ ವ್ಯಕ್ತಪಡಿಸಿದರು.

ನಮ್ಮ ದೇಶಕ್ಕೆ ಬಂದು ನಮ್ಮನ್ನ ಹೊಡೆದು ತಪ್ಪಿಸಿಕೊಂಡು ಹೋಗ್ತಾರೆ ಅಂದ್ರೆ ನಮ್ಮ ಭದ್ರತಾ ವೈಪಲ್ಯ, ಗಡಿಯಲ್ಲಿ ಸೇನೆ ಏನ್ ಮಾಡುತ್ತಿತ್ತು? ನೂರು ಜನರನ್ನ ಹೊಡೆದಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಅದು ಕನ್ಫರ್ಮ್ ಆಗಿಲ್ಲ.  ಉಗ್ರರೇ ಬಂದ್ರಾ..? ಇವರೇ ಕರೆಸಿದ್ರಾ ಚರ್ಚೆಯಾಗಲಿ. ಡಿಬೇಟ್ ಗೆ ಬರಲಿ .  4  ಫ್ಲೈಟ್ ಮೇಲೆ ಕಳಿಸಿದ್ದು ಬಿಟ್ಟರೇ ಬೇರೇನು ಮಾಡಿಲ್ಲ. ಉಗ್ರರು ಗಡಿ ದಾಟಿ ಬಂದಾಗ ನಮ್ಮ ಸೈನಿಕರು ಎಲ್ಲಿದ್ರು..? ಎಂದು ಕೊತ್ತೂರು ಮಂಜುನಾಥ್ ಪ್ರಶ್ನಿಸಿದ್ದಾರೆ.

Key words: congress MLA, Kottur Manjunath, criticizes, Operation Sindhur