Sunday, August 23, 2026

BDA Apartments

Home Front Page ಟೈಲರ್ ಕನ್ಹಯ್ಯಲಾಲ್ ಕೊಲೆ ಅಂತರಾಷ್ಟ್ರೀಯ ಷಡ್ಯಂತ್ರ: ಹಂತಕರನ್ನ ಗಲ್ಲಿಗೇರಿಸಬೇಕು- ಸಿಎಂ ಬೊಮ್ಮಾಯಿ.

ಟೈಲರ್ ಕನ್ಹಯ್ಯಲಾಲ್ ಕೊಲೆ ಅಂತರಾಷ್ಟ್ರೀಯ ಷಡ್ಯಂತ್ರ: ಹಂತಕರನ್ನ ಗಲ್ಲಿಗೇರಿಸಬೇಕು- ಸಿಎಂ ಬೊಮ್ಮಾಯಿ.

ಬೆಂಗಳೂರು,ಜೂನ್,30,2022(www.justkannada.in):  ಉದಯಪುರದಲ್ಲಿ ಟೈಲರ್ ಕನ್ಹಯ್ಯಲಾಲ್ ಹತ್ಯೆ ಮಾಡಿರುವುದು  ಅಮಾನವೀಯ ಮತ್ತು ಹೇಯ ಕೃತ್ಯ. ಇದು ಅಂತರಾಷ್ಟ್ರೀಯ ಷಡ್ಯಂತ್ರ.  ಕೊಲೆ ಪ್ರಕಣದ ಅಪರಾಧಿಗಳನ್ನು ಗಲ್ಲಿಗೇರಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬೊಮ್ಮಾಯಿ, ಟೈಲರ್ ಹತ್ಯೆ ಮಾಡಿದ್ದು ಭಯೋತ್ಮಾದಕತೆ ಕೃತ್ಯ. ಅಪರಾಧಿಗಳ ಹಿಂದೆ ಯಾರೆಲ್ಲ ಇದ್ದಾರೆ, ಯಾವ ಸಂಘಟನೆ ಇದೆ ಅಂತ ಬಯಲಿಗೆ ಬರಬೇಕು  ಎಂದರು.border-districts-state-covid-negative-test-outside-states-minister-basavaraja-bommai

ಚಂಡೀಗಢ ಜಿಎಸ್ಟಿ ಮಂಡಳಿ ಸಭೆ ಕುರಿತು ಮಾತನಾಡಿದ ಸಿಎಂ ಬೊಮ್ಮಾಯಿ, ಸಭೆಯಲ್ಲಿ ಹಲವು ವಿಚಾರಗಳ ಚರ್ಚೆ ಮಾಡಲಾಗಿದೆ. ಕಾನೂನಿನ ತೊಡಕುಗಳನ್ನು ನಿವಾರಣೆಗೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಜ್ಯಗಳಿಗೆ ಜಿಎಸ್ಟಿ ಪರಿಹಾರದ ಅವಧಿ ವಿಸ್ತರಣೆ ಬಗ್ಗೆ ಚರ್ಚೆಯಾಗಿದೆ. ಆಗಸ್ಟ್ ತಿಂಗಳಲ್ಲಿ ಇದರ ಬಗ್ಗೆ ತಿಳಿಸುವುದಾಗಿ  ಸಚಿವರು  ತಿಳಿಸಿದ್ದಾರೆ ಎಂದರು.

Key words: rajasthan-murder – international –conspiracy-CM Bommai.