ನಿವೃತ್ತಿಗೆ ಒಂದು ದಿನ ಇರುವಾಗಲೇ ಬಿಡಿಎ ಗಾರ್ಡನರ್ ಶಿವಲಿಂಗಯ್ಯ  ಸಸ್ಪೆಂಡ್.

ಬೆಂಗಳೂರು,ಜೂನ್,30,2022(www.justkannada.in): ನಿವೃತ್ತಿಗೆ ಒಂದು ದಿನ ಇರುವಾಗಲೇ ಬಿಡಿಎ ಗಾರ್ಡನರ್ ಶಿವಲಿಂಗಯ್ಯ  ಕೆಲಸದಿಂದ ಅಮಾನತಾಗಿದ್ದಾರೆ.

ಆದಾಯ ಮೀರಿ ಆಸ್ತಿ ಗಳಿಕೆ ಆರೋಪದ ಮೇಲೆ ಇತ್ತೀಚೆಗೆ ಬಿಡಿಎ ಗಾರ್ಡನರ್ ಶಿವಲಿಂಗಯ್ಯ   ನಿವಾಸದ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿ ವೇಳೆ ಆದಾಯ ಮೀರಿ ಅಪಾರ ಪ್ರಮಾಣದಲ್ಲಿ ಆಸ್ತಿ ಪತ್ತೆಯಾಗಿತ್ತು. ಆದಾಯಕ್ಕಿಂತ ಶೇ. 397ರಕ್ಕು ಅಕ್ರಮ ಸಂಪತ್ತು ಪತ್ತೆಯಾಗಿತ್ತು.

ಈ  ಬಗ್ಗೆ ವರದಿ ಎಸಿಬಿ ವರದಿ ನೀಡಿತ್ತು. ವರದಿ ಆಧಾರದ ಮೇಲೆ ಶಿವಲಿಂಗಯ್ಯರನ್ನ ಬಿಡಿಎ ಅಮಾನತು ಮಾಡಿದೆ.

Key words: BDA- Gardener –Shivalingaiah- Suspend