Sunday, September 20, 2026

BDA Apartments

ರಾಜಸ್ತಾನದ ಸುಮನ್’ಗೆ ಫೆಮಿನಾ ಮಿಸ್ ಇಂಡಿಯಾ ಕಿರೀಟ BDA JK_Adv BDA Adv
Home Cinema ರಾಜಸ್ತಾನದ ಸುಮನ್’ಗೆ ಫೆಮಿನಾ ಮಿಸ್ ಇಂಡಿಯಾ ಕಿರೀಟ

ರಾಜಸ್ತಾನದ ಸುಮನ್’ಗೆ ಫೆಮಿನಾ ಮಿಸ್ ಇಂಡಿಯಾ ಕಿರೀಟ

ಮುಂಬೈ, ಜೂನ್16, 2019 (www.justkannada.in): 56ನೇ ಫೆಮಿನಾ ಮಿಸ್ ಇಂಡಿಯಾ ಘೋಷಣೆಯಾಗಿದೆ. ರಾಜಸ್ತಾನದ ಸುಮನ್ ರಾವ್, ಫೆಮಿನಾ ಮಿಸ್ ಇಂಡಿಯಾ ಆಗಿ ಆಯ್ಕೆಯಾಗಿದ್ದಾರೆ.

22 ವರ್ಷದ ಸುಮನ್,‌ ಚಾರ್ಟೆಡ್ ಅಕೌಂಟ್ ಆಗುವ ತಯಾರಿ ನಡೆಸಿದ್ದಾರೆ. ಫೆಮಿನಾ ಮಿಸ್ ಇಂಡಿಯಾ ಕಿರೀಟ ಧರಿಸುವ ಮೂಲಕ ತಮ್ಮ ಕನಸು ನನಸು ಮಾಡಿಕೊಂಡಿದ್ದಾರೆ. ಸುಮನ್ ತಂದೆ-ತಾಯಿಯಿಂದ ಹೆಚ್ಚು ಪ್ರಭಾವಿತರಾಗಿದ್ದಾರೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮನ್ ಗೆ 2018ರ ಮಿಸ್ ಇಂಡಿಯಾ ಅನುಕೀರ್ತಿ ವಾಸ್ ಕಿರೀಟ ತೊಡಿಸಿದರು.

ಆಂಧ್ರಪ್ರದೇಶದ ಶ್ರೇಯಾ ರನ್ನರ್ ಅಪ್ ಆದ್ರೆ ತೆಲಂಗಾಣದ ಶಿವಾನಿ ಎರಡನೇ ರನ್ನರ್ ಅಪ್ ಆಗಿದ್ದಾರೆ. ಮಿಸ್ ಇಂಡಿಯಾ ಸುಮನ್, ಮಿಸ್ ವಲ್ಡ್ ಕಿರೀಟಕ್ಕೆ ಸ್ಪರ್ಧೆ ನಡೆಸಲಿದ್ದಾರೆ. ಮಿಸ್ ವಲ್ಡ್ ಸ್ಪರ್ಧೆಗೆ ಭಾರತದಿಂದ ಸುಮನ್ ಸ್ಪರ್ಧೆ ನಡೆಸಲಿದ್ದಾರೆ.