ಮನೆ ತೆರವು: ಜನರಿಗೊಂದು ನ್ಯಾಯ. ಪ್ರಭಾವಿಗಳಿಗೊಂದು ನ್ಯಾಯನಾ..? ಮಾಜಿ ಸಿಎಂ ಹೆಚ್.ಡಿಕೆ ಅಸಮಾಧಾನ.

ಬೆಂಗಳೂರು,ಸೆಪ್ಟಂಬರ್,14,2022(www.justkannada.in):  ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿರುವ ರಾಜ್ಯ ಸರ್ಕಾರದ ವಿರುದ‍್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜನಸಾಮಾನ್ಯರ ಮನೆ ತೆರವುಗೊಳಿಸುತ್ತಿರುವ ಸಂಬಂಧ ಜನರಿಗೊಂದು ನ್ಯಾಯ ಪ್ರಭಾವಿಗಳಿಗೊಂದು ನ್ಯಾಯನಾ..? ಎಂದು ಪ್ರಶ್ನಿಸಿರುವ ಹೆಚ್.ಡಿ ಕುಮಾರಸ್ವಾಮಿ , ಸಾಲ ಮಾಡಿ ಬಡವರು ಮನೆ ಖರೀದಿ ಮಾಡ್ತಾರೆ ಒತ್ತುವರಿದಾರ ಜಾಗವನ್ನ ಮಾರಾಟ ಮಾಡುತ್ತಾನೆ. ಆದರೆ ಮನೆ ಕೊಂಡವರ ಪಾಡೇನು..?  ಅವರಿಗೆ ಗೊತ್ತಿಲ್ಲ.

ಕ್ರಮ ಕೈಗೊಳ್ಳುವುದಾದರೇ  ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಿ. ಮನೆ ಮಾರಿ ಹೋದವರ ಮೇಲೆ ಕ್ರಮಕೈಗೊಳ್ಳಬೇಕು.  ಖರೀದಿಸಿದರವರ ಮನೆ ಖರೀದಿಸಿದ ಬಡ ಜನರ ಬಗ್ಗೆ ಸರ್ಕಾರ ಯೋಚಿಸಬೇಕು ಎಂದು ಸರ್ಕಾರಕ್ಕೆ ಹೆಚ್.ಡಿ ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.

Key words: rajakaluve-justice – people- influential- Former CM- H.D.kumaraswamy