ಬೆಂಗಳೂರಿನ ಹಲವು ಭಾಗಗಳ ನಿವಾಸಿಗಳಿಗೆ ಅಚ್ಚರಿ, ಆಘಾತ ಮೂಡಿಸಿದ ಮಳೆರಾಯ.

ಬೆಂಗಳೂರು, ಸೆಪ್ಟೆಂಬರ್,6,2022 (www.justkannada.in): ಬೆಂಗಳೂರಿನ ಅನೇಕ ನಿವಾಸಿಗಳಿಗೆ ತಮ್ಮ ದುಬಾರಿ ಕಾರುಗಳನ್ನು ಬಿಟ್ಟು ನಗರದ ರಸ್ತೆಯಲ್ಲಿ ತೆಪ್ಪಗಳಲ್ಲಿ ಓಡಾಡಬೇಕಾಗಬಹುದು ಎಂದು ಕಲ್ಪನೆಯೂ ಇರಲಿಲ್ಲ. ಆದರೆ ರೇನ್‌ ಬೋ ಕಾಲೋನಿಯ ಮನೆಗಳು ಸಂಪೂರ್ಣವಾಗಿ ಜಲಾವೃತ್ತಗೊಂಡು ಅಚ್ಚು ಕೆರೆಯಂತೆಯೇ ಕಾಣುತ್ತಿದೆ. ಮನೆಗಳ ಮುಂದೆ ನಿಲ್ಲಿಸಿರುವ ನಿವಾಸಿಗಳ ದುಬಾರಿ ಕಾರುಗಳು ಬಹುಪಾಲು ಮುಳಗಿವೆ. ಆ ಕಾರುಗಳ ಮಾಲೀಕರು ತಮ್ಮ ವಾಹನಗಳನ್ನು ಉಪಯೋಗಿಸುವುದು ಸಾಧ್ಯವಾಗುತ್ತಿಲ್ಲ. ಅಂತಿಮವಾಗಿ ಅಲ್ಲಿಂದ ಪಾರಾಗಲು ಕೇವಲ ಒಂದೇ ಒಂದು ಮಾರ್ಗವೇನೆಂದರೆ ರಕ್ಷಣಾ ತಂಡದವರ ಜೊತೆಗೆ ಬೋಟುಗಳಲ್ಲಿ ಬೇರೆ ಕಡೆಗೆ ತೆರಳುವುದಾಗಿದೆ.

ಬೆಂಗಳೂರು ನಗರದಲ್ಲಿ ಕಳೆದ ಎರಡು ವಾರಗಳಿಂದ ಸತತವಾಗಿ ಮಳೆ ಸುರಿಯುತ್ತಿದ್ದು, ಎರಡನೆಯ ಬಾರಿಗೆ ಹಲವು ಬಡಾವಣೆಗಳು ಸಂಪೂರ್ಣವಾಗಿ ಜಲಾವೃತ್ತಗೊಂಡಿವೆ. ಈ ಹಿನ್ನೆಲೆಯಲ್ಲಿ ಮಳೆನೀರಿನಲ್ಲಿ ಸಿಲುಕಿಕೊಂಡಿರುವ ಕುಟುಂಬಗಳ ಸದಸ್ಯರನ್ನು ರಕ್ಷಿಸಲು ಕೆಲವು ಜನರು ಮುಂದಾಗಿದ್ದಾರೆ. ರೇನ್‌ ಬೊ ಬಡಾವಣೆಯಲ್ಲಿ ಬೋಟುಗಳನ್ನು ಬಳಸಿ ಜನರನ್ನು ಸ್ಥಳಾಂತರಗೊಳಿಸಲಾಯಿತು. ಇಕೊಸ್ಪೇಸ್ ಬಳಿ ಇರುವ ಓಆರ್‌ ಅರ್ ಮತ್ತೊಮ್ಮೆ ಜಲಾವೃತ್ತಗೊಂಡಿದ್ದು, ಪಾದಚಾರಿಗಳು ಹಾಗೂ ವಾಹನ ಸವಾರರನ್ನು ರಸ್ತೆ ದಾಟಿಸಲು ಭದ್ರತಾ ಸಿಬ್ಬಂದಿಗಳು ನೆರವಾಗುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲು ಈ ಸಂದರ್ಭದಲ್ಲಿ ಟ್ರ್ಯಾಕ್ಟರ್‌ ಗಳು ಬಹಳ ಸುರಕ್ಷಿತವಾಗಿದ್ದು ಜನರಿಗೆ ಬಹಳ ನೆರವಾಗಿವೆ. ಜನರು ತಮ್ಮ ಅಗತ್ಯ ವಸ್ತುಗಳೊಂದಿಗೆ ಟ್ರ್ಯಾಕ್ಟರ್‌ ಗಳಲ್ಲಿ ತೆರಳುತ್ತಿರುವುದು ಕಂಡು ಬಂತು. ಟ್ರ್ಯಾಕ್ಟರ್‌ ಗಳಿಗೆ ದೊಡ್ಡ ಚಕ್ರಗಳಿರುತ್ತವೆ, ಹಾಗಾಗಿ ೨-೩ ಅಡಿಗಳಷ್ಟು ನೀರಿನಲ್ಲಿ ಸುಲಭವಾಗಿ ಸಾಗುತ್ತವೆ. ಹಾಗಾಗಿ, ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಪ್ರತಿಷ್ಠಿತ ಎನಿಸಿಕೊಂಡಿರುವ ಜನರೂ ಸಹ ಟ್ರ್ಯಾಕ್ಟರ್‌ ಗಳಲ್ಲಿ ತಮ್ಮ ಮೆಚ್ಚಿನ ಸಾಕುಪ್ರಾಣಿಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿರುವ ದೃಶ್ಯ ಕಂಡು ಬಂತು. ಯಮಲೂರಿನಲ್ಲಿ ಎಸ್‌ ಡಿಆರ್‌ ಎಫ್ ಸಿಬ್ಬಂದಿಗಳು ಹಲವು ಹಿರಿಯ ನಾಗರಿಕರು ಮತ್ತು ವಿದ್ಯಾರ್ಥಿಗಳಿಗೆ ಟ್ರ್ಯಾಕ್ಟರ್‌ ಗಳಲ್ಲಿ ಸುರಕ್ಷಿತ ಸ್ಥಳಗಳಿಗೆ ತೆರಳಲು ನೆರವಾದರು.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: Rain – shocked – residents – Bangalore.