ಮೈಸೂರು ದಸರಾ ಮಹೋತ್ಸವ:  ನಾಳೆ ಫಿರಂಗಿ ತಾಲೀಮಿಗೆ ಸಿದ್ಧತೆ.

ಮೈಸೂರು,ಸೆಪ್ಟಂಬರ್,29,2021(www.justkannada.in): ನಾಡಹಬ್ಬ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು ಅಕ್ಟೋಬರ್ 15ರ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ನಾಡಿಗೆ ಆಗಮಿಸಿ ಮೈಸೂರು ಅರಮನೆಯಲ್ಲಿ ಬೀಡು ಬಿಟ್ಟಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗೆ ನಿತ್ಯ ತಾಲೀಮು ನಡೆಸಲಾಗುತ್ತಿದ್ದು ನಾಳೆ ಫಿರಂಗಿ ತಾಲೀಮು ನಡೆಯಲಿದೆ.

ಈ ಬಗ್ಗೆ ಮೈಸೂರಿನ ಅರಮನೆಯಲ್ಲಿ ಮಾಹಿತಿ ನೀಡಿದ ಡಿಸಿಎಫ್ ಕರಿಕಾಳನ್ ನಾಳೆ ಬೆಳಗ್ಗೆ 11.30ಕ್ಕೆ ಫಿರಂಗಿ ತಾಲೀಮು ನಡೆಯಲಿದೆ. ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಗಜಪಡೆ ಹಾಗೂ ಅಶ್ವಗಳು ಬೆದರಂತೆ ಫಿರಂಗಿ ತಾಲೀಮು ನಡೆಸಲಾಗುತ್ತದೆ. ಈಗಾಗಲೇ ಸಿಬ್ಬಂದಿಗಳು ಅರಮನೆ ಮುಂಭಾಗ ಡ್ರೈ ತಾಲೀಮು ನಡೆಸಿದ್ದಾರೆ. ಒಟ್ಟು ಸಿಬ್ಬಂದಿಗಳು ಮೂರು ಬಾರಿ ಫಿರಂಗಿ ತಾಲೀಮು ನಡೆಸಲಿದ್ದು, ಆನೆಗಳು, ಅಶ್ವಗಳು ಬೆದರಂತೆ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ರಾಷ್ಟ್ರಗೀತೆ ವೇಳೆ 21 ಸುತ್ತು ಸಿಡಿಮದ್ದು ಗೌರವ ಸಲ್ಲಿಕೆಗೆ ಸಿದ್ದತೆ ನಡೆಸಲಾಗಿದೆ.  ಈಗಾಗಲೇ ಗಜಪಡೆಯ ಮೂರು‌ ಆನೆಗಳಿಗೆ ಸಾವಿರ ಕೆಜಿವರೆಗೆ ತೂಕ ಹೊರಿಸಿ ತಾಲೀಮು ನಡೆಸಲಾಗಿದ್ದು, ಅಕ್ಟೋಬರ್ ಮೊದಲ ವಾರದಲ್ಲಿ ಮರದ ಅಂಬಾರಿ ತಾಲೀಮು ನಡೆಯಲಿದೆ ಎಂದು ಡಿಸಿಎಫ್ ಕರಿಕಾಳನ್ ತಿಳಿಸಿದರು.

Key words: Mysore- Dasara Mahotsava-Preparing – artillery –workout- tomorrow.