Saturday, September 12, 2026

BDA Apartments

Home Front Page ಮೈಸೂರಲ್ಲಿ ಮಳೆ ಅವಾಂತರ: ಧರೆಗುರುಳಿದ ವಿದ್ಯುತ್ ಕಂಬ, ಕೇಬಲ್‌ ಗಳು, ನಿವಾಸಿಗಳ ಪರದಾಟ

ಮೈಸೂರಲ್ಲಿ ಮಳೆ ಅವಾಂತರ: ಧರೆಗುರುಳಿದ ವಿದ್ಯುತ್ ಕಂಬ, ಕೇಬಲ್‌ ಗಳು, ನಿವಾಸಿಗಳ ಪರದಾಟ

ಮೈಸೂರು,ಜೂನ್,12,2026 (www.justkannada.in):  ಗುರುವಾರ ಸಂಜೆ ಸುರಿದ ಭಾರೀ ಮಳೆಯಿಂದ ಮೈಸೂರಿನ ಮೇಟಗಳ್ಳಿ ಬಡಾವಣೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಧಾರಾಕಾರ ಮಳೆಯ ಪರಿಣಾಮ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಂಬಗಳು ಮತ್ತು ಕೇಬಲ್ ವೈರ್‌ ಗಳು ಧರೆಗೆ ಉರುಳಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮನೆಮಾಡಿದೆ.

ಮೇಟಗಳ್ಳಿ ಬಡಾವಣೆಯ ಕೆಲವು ರಸ್ತೆಗಳಲ್ಲಿ ವಿದ್ಯುತ್ ಕಂಬಗಳು ವಾಲಿದ ಪರಿಣಾಮ ವಿದ್ಯುತ್ ತಂತಿಗಳು ರಸ್ತೆಗೆ ತಾಗುವ ಮಟ್ಟಕ್ಕೆ ಕುಸಿದಿದ್ದು, ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ವಿದ್ಯುತ್ ಅವಘಡ ಸಂಭವಿಸುವ ಭೀತಿಯಿಂದ ಸ್ಥಳೀಯರು ಎಚ್ಚರಿಕೆಯಿಂದ ಓಡಾಡುವಂತಾಗಿದೆ.

ಮಳೆಯಿಂದ ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಮತ್ತು ಪಾದಚಾರಿಗಳು ಸಂಕಷ್ಟ ಅನುಭವಿಸಿದರು. ಕೆಲ ಪ್ರದೇಶಗಳಲ್ಲಿ ಮರಗಳ ಕೊಂಬೆಗಳು ಮುರಿದು ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕ ವ್ಯತ್ಯಯಗೊಂಡಿದ್ದು, ಹಲವು ಮನೆಗಳಲ್ಲಿ ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ ಎಂದು ನಿವಾಸಿಗಳು ದೂರಿದ್ದಾರೆ.ಮೈಸೂರಲ್ಲಿ ಮಳೆ ಅವಾಂತರ rain bangalore

ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ವಿದ್ಯುತ್ ಇಲಾಖೆ ಹಾಗೂ ಸ್ಥಳೀಯ ಆಡಳಿತದ ಸಿಬ್ಬಂದಿ ಹಾನಿಗೊಳಗಾದ ಕಂಬಗಳು ಮತ್ತು ಕೇಬಲ್‌ಗಳ ದುರಸ್ತಿ ಕಾರ್ಯ ಆರಂಭಿಸಿದರು. ಅಪಾಯದ ಸ್ಥಳಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ಸಾರ್ವಜನಿಕರನ್ನು ದೂರವಿರಲು ಸೂಚಿಸಲಾಯಿತು.ಧರೆಗುರುಳಿದ ವಿದ್ಯುತ್ ಕಂಬ BDA JK_Adv BDA Adv

ಮಳೆಯ ಅಬ್ಬರದಿಂದ ಮೇಟಗಳ್ಳಿ ಬಡಾವಣೆ ಸಂಪೂರ್ಣವಾಗಿ ಮಂಕಾಗಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಮೂಲಸೌಕರ್ಯಗಳನ್ನು ಬಲಪಡಿಸುವಂತೆ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ವರುಣನ ಅಬ್ಬರ ಮುಂದುವರಿದರೆ ಇನ್ನಷ್ಟು ಸಮಸ್ಯೆಗಳು ಎದುರಾಗುವ ಆತಂಕವೂ ವ್ಯಕ್ತವಾಗಿದೆ.ಕೇಬಲ್‌ ಗಳು jk02_new jk02 new

Key words: Rain, havoc, Mysore, electric poles, cables