ನೆರೆ ಬಂದ ಪ್ರದೇಶದಲ್ಲಿ ಮತ್ತೆ ಮಳೆ: ಇದು ನಮ್ಮ ಗ್ರಹಚಾರ ಎಂದ ಸಿಎಂ ಬಿ.ಎಸ್ ಯಡಿಯೂರಪ್ಪ…

ಬೆಂಗಳೂರು,ಅ,23,2019(www.justkannada.in):  ನೆರೆ ಬಂದ ಪ್ರದೇಶದಲ್ಲೇ ಮತ್ತೆ ಮಳೆಯಾಗಿದೆ. ಹೀಗಾಗಿ ಅಧಿಕಾರಿಗಳ ಜತೆ ಚರ್ಚಿಸಿ ನೆರೆ ಪರಿಹಾರಕ್ಕೆ ಸೂಚಿಸಿದ್ದೇನೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸಿಎಂ ಬಿ.ಎಸ್ ಯಡಿಯೂರಪ್ಪ,  ಇದು ನಮ್ಮ ಗ್ರಹಚವಾರ. ಮತ್ತೆ ವರುಣನ ಅವಕೃಪೆಗೆ ತುತ್ತಾಗಿದ್ದೇವೆ. ನೆರೆ ಬಂದ ಪ್ರದೇಶದಲ್ಲೇ ಮತ್ತೆ ಮತ್ತೆ ಮಳೆಯಾಗಿದೆ. ಊರಿಗೆ  ಊರರೇ ,ವಾಹನಗಳೆ ಕೊಚ್ಚಿ ಹೋಗುತ್ತಿವೆ. ಮತ್ತೆ ಮತ್ತೆ ಮಳೆಯಾಗುತ್ತಿರುವ ಹಿನ್ನೆಲೆ ಕೇಂದ್ರದ ಬಳಿ ಮತ್ತಷ್ಟು ಪರಿಹಾರ ಕೇಳುತ್ತೇವೆ ಎಂದು ತಿಳಿಸಿದರು.

ನೆರೆ ಹಾವಳಿ ಬಗ್ಗೆ ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿದ್ದೇನೆ. ಪರಿಹಾರ ನೀಡುವಂತೆ ಸೂಚನೆ ನೀಡಿದ್ದೇನೆ. ನೆರೆ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.

Key words: Rain –flood-area -instruct-officer- CM BS yeddyurappa