ನಾಳೆಯಿಂದ ಇನ್ನೂ ಐದು ದಿನಗಳ ಕಾಲ ಮಳೆ- ಹವಮಾನ ಇಲಾಖೆ ಮುನ್ಸೂಚನೆ.

ಬೆಂಗಳೂರು,ಡಿಸೆಂಬರ್,14,2022(www.justkannada.in):  ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಚಳಿಯ ನಡುವೆ ಮೋಡ ಕವಿದ ವಾತಾವರಣ ಮಳೆಯಾಗಿದ್ದು , ಚಳಿ ಮಳೆಗೆ ಜನರು ತತ್ತರಿಸಿದ್ದಾರೆ. ಈ ನಡುವೆ ನಾಳೆಯಿಂದ ಮತ್ತೆ ಐದು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.

 ಈ ಕುರಿತು ಮಾಹಿತಿ ನೀಡಿರುವ ಹವಾಮಾನ ಇಲಾಖೆ ತಜ್ಞ ಆರ್.ಪ್ರಸಾದ್, ರಾಜ್ಯದಲ್ಲಿ ಇನ್ನೂ ಐದು ದಿನಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಯಲಿದ್ದು, ಚಳಿ, ಗಾಳಿ, ಮಳೆಯಾಗಲಿದೆ ಎಂದು ತಿಳಿಸಿದ್ದಾರೆ.

 ಬಂಗಾಳಕೊಲ್ಲಿಯಲ್ಲಿ ನಾಳೆ ವಾಯುಭಾರ ಕುಸಿತವಾಗಲಿದ್ದು,  ಹೀಗಾಗಿ ರಾಜ್ಯದಲ್ಲಿ ಇನ್ನೂ 5 ದಿನಗಳ ಕಾಲ ಮಳೆ ಮುನ್ಸೂಚನೆ ಇದೆ. ಬೆಂಗಳೂರಿನ ಸುತ್ತಮುತ್ತಲೂ 1ರಿಂದ 2 ಸೆಂ.ಮೀ. ಮಳೆಯಾಗಿದೆ. ಬೆಂಗಳೂರಿನಲ್ಲೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಆರ್.ಪ್ರಸಾದ್ ತಿಳಿಸಿದ್ದಾರೆ.

Key words: Rain – five- days –state-Meteorological- department