Thursday, July 30, 2026

BDA Apartments

Home Front Page ಮಳೆಯಾಗದಿದ್ದರೇ ಬೆಂಗಳೂರು ನಗರಕ್ಕೆ ನೀರಿನ ಕೊರತೆ- ಜಲಮಂಡಳಿ ಅಧ್ಯಕ್ಷೆ ಮಂಜುಳ

ಮಳೆಯಾಗದಿದ್ದರೇ ಬೆಂಗಳೂರು ನಗರಕ್ಕೆ ನೀರಿನ ಕೊರತೆ- ಜಲಮಂಡಳಿ ಅಧ್ಯಕ್ಷೆ ಮಂಜುಳ

ಬೆಂಗಳೂರು,ಜುಲೈ,30,2026 (www.justkannada.in):  ಸರಿಯಾಗಿ ಮಳೆಯಾಗದಿದ್ದರೇ ಬೆಂಗಳೂರು ನಗರಕ್ಕೆ ನೀರಿನ ಕೊರತೆ ಎದುರಾಗಲಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷೆ ಡಾ.ಎನ್. ಮಂಜುಳಾ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ತಮಿಳುನಾಡಿಗೆ ನೀರು ಹರಿಸುವಂತೆ ಸಿಡಬ್ಲ್ಯುಆರ್ ಸಿ  ಆದೇಶ ಹಿನ್ನೆಲೆ ಈ ಕುರಿತು ಮಾತನಾಡಿದ ಜಲಮಂಡಳಿ ಅಧ್ಯಕ್ಷೆ ಮಂಜುಳಾ, ಬೆಂಗಳೂರಿಗೆ 5 ರಿಂದ 6 ತಿಂಗಳಿಗೆ ಆಗುವಷ್ಟು ಮಾತ್ರ ನೀರಿದೆ. ಸದ್ಯ ಕೆಆರ್ ಎಸ್ ಡ್ಯಾಂನಲ್ಲಿ 20 ಟಿಎಂಸಿ ನೀರಿದೆ. ಈ ಪೈಕಿ ಬಳಕೆಗೆ ಯೋಗ್ಯವಾದದ್ದು ಕೇವಲ 14 ಟಿಎಂಸಿ ಮಾತ್ರ.   ಇದರಿಂದ ಮುಂದಿನ 5 ತಿಂಗಳಿಗೆ ಬೆಂಗಳೂರಿಗೆ ನೀರು ಪೂರೈಕೆ ಸಾಧ್ಯ .

ಒಂದು ವೇಳೆ ಮಳೆಯಾಗದಿದ್ದರೇ ಬೆಂಗಳೂರಲ್ಲಿ ನೀರಿನ ಸಮಸ್ಯೆ ಎದುರಾಗಲಿದೆ ಎಂದು ಮಂಜುಳ ಅವರು ತಿಳಿಸಿದ್ದಾರೆ.

Key words: rain, Bengaluru city, water shortage, Manjula