ಏ.5ರಂದು ಇದ್ದ ಕಾರ್ಯಕ್ರಮ ಮುಂದೂಡಿಕೆ : ಏ.9ಕ್ಕೆ ಕೋಲಾರಕ್ಕೆ ರಾಹುಲ್ ಗಾಂಧಿ ಬರಲಿದ್ದಾರೆ- ಮಾಜಿ ಸಿಎಂ ಸಿದ್ಧರಾಮಯ್ಯ.

ಬೆಂಗಳೂರು,ಏಪ್ರಿಲ್,1,2023(www.justkannada.in):  ಏಪ್ರಿಲ್ 5 ರಂದು ನಡೆಯಬೇಕಿದ್ದ ಸತ್ಯಮೇವ ಜಯತೆ ಸಮಾವೇಶ ಏಪ್ರಿಲ್ 9ಕ್ಕೆ ಮುಂದೂಡಿಕೆಯಾಗಿದೆ. ಅಂದು ರಾಹುಲ್ ಗಾಂಧಿ ಆಗಮಿಸಲಿದ್ದಾರೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದರು.

ಈ ಕುರಿತು ಇಂದು ಮಾತನಾಡಿದ ಸಿದ್ಧರಾಮಯ್ಯ, ಏಪ್ರಿಲ್ 9ಕ್ಕೆ ಕೋಲಾರಕ್ಕೆ  ರಾಹುಲ್ ಗಾಂಧಿ ಬರುತ್ತಾರೆ. ಏಪ್ರಿಲ್ 5 ರಂದು ಇದ್ದ ಕಾರ್ಯಕ್ರಮ ರದ್ದಾಗಿದೆ ಕೋಲಾರದಲ್ಲಿ ಬೃಹತ್ ರ್ಯಾಲಿ ನಡೆಯಲಿದ್ದು ಸುಮಾರು 2ಲಕ್ಷಕ್ಕೂ ಅಧಿಕ ಜನರು ಸೇರುವ ಸಾಧ್ಯತೆ ಇದೆ ಎಂದರು.

ಏಪ್ರಿಲ್ 9 ರಂದು ಕಾಂಗ್ರೆಸ್ ಪಕ್ಷದ ಸತ್ಯಮೇವ ಜಯತೆ ಬೃಹತ್ ಸಮಾವೇಶವನ್ನು ಉದ್ದೇಶಿಸಿ  ರಾಹುಲ್ ಗಾಂಧಿ ಅವರು ಮಾತಾಡಲಿದ್ದಾರೆ.

Key words: Rahul Gandhi -will come-Kolar on April 9 – Former CM- Siddaramaiah.