14 ಕಾಲ್ನಡಿಗೆಯಲ್ಲಿ ಸಾಗಿ ವೈಷ್ಣೋದೇವಿ ದರ್ಶನ ಪಡೆದ ರಾಹುಲ್ ಗಾಂಧಿ

ಬೆಂಗಳೂರು, ಸೆಪ್ಟೆಂಬರ್ 10, 2021 (www.justkannada.in): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕತ್ರಾದಿಂದ ವೈಷ್ಣೋದೇವಿ ದೇವಾಲಯಕ್ಕೆ ಕಾಲ್ನಡಿಗೆಯಲ್ಲಿ ಪ್ರಯಾಣಿಸಿ ದೇವರ ದರ್ಶನ ಪಡೆದಿದ್ದಾರೆ.

ತ್ರಿಕುಟಾ ಬೆಟ್ಟದಲ್ಲಿರುವ ಹೆಸರಾಂತ ಯಾತ್ರಾ ಸ್ಥಳ ವೈಷ್ಣೋದೇವಿ ಗುಹೆಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕಾಲ್ನಡಿಗೆಯಲ್ಲಿ ಸಾಗಿದ್ದಾರೆ.

ಜಮ್ಮುವಿನ ಕಟ್ರಾದಿಂದ 14 ಕಿ.ಮೀ ನಡಿಗೆಯಲ್ಲಿ ಬಂದ ರಾಹುಲ್, ಶುಕ್ರವಾರ ಬೆಳಗ್ಗೆ ವೈಷ್ಣೋದೇವಿ  ದರ್ಶನ ಪಡೆದಿದ್ದಾರೆ.

ನಾನು ದೇವಿಗೆ ಪ್ರಾರ್ಥನೆ ಸಲ್ಲಿಸಲು ಇಲ್ಲಿಗೆ ಬಂದಿದ್ದೇನೆ. ನಾನು ಇಲ್ಲಿ ಯಾವುದೇ ರಾಜಕೀಯ ಟೀಕೆಗಳನ್ನು ಮಾಡಲು ಬಯಸುವುದಿಲ್ಲ ಎಂದು ಈ ವೇಳೆ ರಾಹುಲ್ ಹೇಳಿದ್ದಾರೆ.

 

key words: Rahul Gandhi walk 14 km for Vaishno Devi darshan