ತಮಿಳುನಾಡು, ಉತ್ತರಾಖಂಡ, ನಾಗಾಲ್ಯಾಂಡ್, ಪಂಜಾಬ್’ಗೆ ಹೊಸ ರಾಜ್ಯಪಾಲರ ನೇಮಕ

ಬೆಂಗಳೂರು, ಸೆಪ್ಟೆಂಬರ್ 10, 2021 (www.justkannada.in): ತಮಿಳುನಾಡು, ಉತ್ತರಾಖಂಡ ಸೇರಿದಂತೆ ನಾಲ್ಕು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಕವಾಗಿದೆ.

ಈ ಸಂಬಂಧ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆದೇಶ ಹೊರಡಿಸಿದ್ದಾರೆ. ಈ ಮೂಲಕ ತಮಿಳುನಾಡು, ಉತ್ತರಾಖಂಡ್, ಪಂಜಾಬ್ ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಕವಾಗಿದೆ.

ತಮಿಳುನಾಡು ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಪಂಜಾಬ್ ರಾಜ್ಯದ ರಾಜ್ಯಪಾಲರಾಗಿ ನೇಮಕವಾಗಿದ್ದಾರೆ.Entry of devotees to Bhagamandala temple restricted tomorrow due to President's visit Kodagu, Feb. 5, 2021 (www.justkannada.in): President of India Sri Ramnath Kovind is visiting Talacauvery in Kodagu district tomorrow. Following this entry of devotees to the temple here has been restricted. The Hon'ble president will visit Talacauvery tomorrow along with his family, following which entry of devotees has been restricted for two days starting from today. Arrangements have been made to sanitize the entire temple on both days. Keywords: Talacauvery/ Kodagu/ President Ramnath Kovind to visit Kodagu tomorrow

ಅಸ್ಸಾಂನ ರಾಜ್ಯಪಾಲ ಪ್ರೊ. ಜಗದೀಶ್ ಮುಖಿ ನಾಗಾಲ್ಯಾಂಡ್‌ನ ಉಸ್ತುವಾರಿ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ. ನಾಗಲ್ಯಾಂಡ್ ರಾಜ್ಯದ ಮಾಜಿ ರಾಜ್ಯಪಾಲ ಆರ್. ಎನ್. ರವಿ ತಮಿಳುನಾಡಿನ ನೂತನ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಗುರ್‌ ಮೀತ್ ಸಿಂಗ್ ಉತ್ತರಾಖಂಡ್‌ ನೂತನ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.

ಬೇಬಿ ರಾಣಿ ಮೌರ್ಯ ಅವರು ಉತ್ತರಾಖಂಡ ರಾಜ್ಯಪಾಲೆ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಗುರ್ಮಿತ್ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ. ಲೆಫ್ಟಿನೆಂಟ್‌ ಜನರಲ್‌ ಗುರ್ಮಿತ್‌ ಸಿಂಗ್‌ ಅವರು ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗಿ ನಿವೃತ್ತರಾಗಿದ್ದರು.

key words: New Governor appointed for Tamil Nadu, Uttarakhand, Nagaland and Punjab