ರಾಹುಲ್ ಗಾಂಧಿ ಓರ್ವ ಡ್ರಗ್ ಅಡಿಕ್ಟ್, ಪೆಡ್ಲರ್ ಅಂತಾ ವರದಿ- ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿವಾದಾತ್ಮಕ ಹೇಳಿಕೆ.

ಹುಬ್ಬಳ್ಳಿ,ಅಕ್ಟೋಬರ್,19,2021(www.justkannada.in): ಸಿಂದಗಿ ಮತ್ತು ಹಾನಗಲ್ ಉಪಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್ ,ಜೆಡಿಎಸ್ ಮತ್ತು ಬಿಜೆಪಿ ನಾಯಕರು ಪರಸ್ಪರ ಆರೋಪ ಪ್ರತ್ಯಾರೋಪ, ಟೀಕೆಗಳಲ್ಲಿ ತೊಡಗಿದ್ದು ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್  ವಿವಾದಾತ್ಮಕ ಹೇಳಿಕೆಯೊಂದನ್ನ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿರುವ ನಳೀನ್ ಕುಮಾರ್ ಕಟೀಲ್, ರಾಹುಲ್ ಗಾಂಧಿ ಒಬ್ಬ ಡ್ರಗ್ ಅಡಿಕ್ಟ್ ಪೆಡ್ಲರ್ ಅಂತಾ ವರದಿ ಇದೆ ಎಂದು ಹೇಳುವ ಮೂಲಕ ವಿವಾದಕ್ಕೆ ಸಿಲುಕಿದ್ದಾರೆ.

ಹಾಗೆಯೇ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರೆಸಿದ ನಳೀನ್ ಕುಮಾರ್ ಕಟೀಲ್, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿದ್ದಾರೆ. ರಾಹುಲ್ ಗಾಂಧಿ ಸೋನಿಯಾ ಗಾಂಧಿ ನಡುವೆ ಪೈಪೋಟಿ ಇದೆ.  ಅವರಿಗೆ ಅವರ ಪಕ್ಷವನ್ನೇ ಮುನ್ನಡೆಸಲು ಆಗುತ್ತಿಲ್ಲ. ಇನ್ನು ದೇಶವನ್ನ ಮುನ್ನಡೆಸುತ್ತಾರಾ ಎಂದು ಪ್ರಶ್ನಿಸಿದ್ದಾರೆ.

ನಮ್ಮ ಪ್ರಧಾನಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂದ್ರೆ ಸಿದ್ಧರಾಮಯ್ಯ ಸಾಬರ್ ಕ ಸಾಥ್ ಸಾಬರ್ ಕಾ ವಿಕಾಸ್ ಅಂತಾರೆ. ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ.  ಉಗ್ರಪ್ಪ ಜೀವನದಲ್ಲೇ ಪಿಸುಮಾತು ಆಡಿಲ್ಲ. ಉಗ್ರಪ್ಪ ಪಿಸುಮಾತಿನ ಹಿಂದೆ ಸಿದ್ಧರಾಮಯ್ಯನ ಕೈವಾಡವಿದೆ. ಸಿದ್ಧರಾಮಯ್ಯ ಮತ್ತು ಡಿಕೆ ಶಿವಕುಮಾರ್ ಜೋಡೆತ್ತಲ್ಲ ಕಾಡೆತ್ತು ಎಂದು ನಳೀನ್ ಕುಮಾರ್ ಕಟೀಲ್ ಟೀಕಿಸಿದ್ದಾರೆ.

Key words: Rahul Gandhi -drug addict- peddler- Controversial statement – BJP presiden-t Nalin Kumar katil

ENGLISH SUMMARY…

“Report says Rahul Gandhi is a drug addict, drug peddler”: Controversial statement by BJP State President Nalin Kumar Kateel
Hubballi, October 19, 2021 (www.justkannada.in): The mudslinging between all the major political party leaders has increased as the byelections for the Sindhagi and Hanagal constituencies are approaching. It is now the turn of BJP State President Nalin Kumar Kateel who has given a controversial statement on Congress leader Rahul Gandhi. “Rahul Gandhi is a drug addict and a drug peddler according to a report,” he said.
Speaking in Hubballi today, he said that there is a competition between Rahul Gandhi and Sonia Gandhi for the post of the AICC president. “When they are not able to run their party, how can they run the country?” he questioned.
“If our Prime Minister says “Sab Ka Saath Sab Ka Vikas,” Siddaramaiah says, “Saabar Ka Saath, Saabar Ka Vikas” (development of only muslims). Fearing failure in the elections, they are involved in luring people. Ugrappa has never whispered anything in his life. I see Siddaramaiah’s politics behind Ugrappa’s whispers,” he added.
Keywords: Rahul Gandhi/ BJP State President/ Nalin Kumar Kateel/ controversial statement